ಶ್ರೀನಗರ : ಭಾರತಕ್ಕೆ ಹೆಚ್ಚಿನ ಭಯೋತ್ಪಾದಕರು ಗಡಿನಿಯಂತ್ರಣ ರೇಖೆಯ ಬಳಿ ಒಳನುಸುಳಲು ತಯಾರಿ ನಡೆಸುತ್ತಿದ್ದಾರೆ ಎಂದು ಸೇನಾ ಕಮಾಂಡರ್ ದುವಾ ತಿಳಿಸಿದ್ದಾರೆ.
ಚಳಿಗಾಲದಲ್ಲಿ ಮಂಜು ಬೀಳುವ ಮುನ್ನ 300ಕ್ಕೂ ಹೆಚ್ಚು ಜನ ಬಂಡುಕೋರರು ಮತ್ತು ಭಯೋತ್ಪಾದಕರು ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಭಾರತದ ಗಡಿಗಳಲ್ಲಿ ಈ ಬಂಡುಕೋರರಿಂದ ಕದನ ವಿರಾಮ ಉಲ್ಲಂಘನೆ ಯಾಗುತ್ತಿದೆ.
ಇದರಿಂದ ಭಾರತದ ಇಬ್ಬರು ಯೋಧರು ಜೀವ ಕಳೆದುಕೊಂಡಿದ್ದಾರೆ. ಇದು ಬಂಡುಕೋರರು ಮತ್ತು ಭಯೋತ್ಪಾದಕರು ಒಳನುಸುಳಲು ಮಾಡುವ ಪ್ರಯತ್ನ ಅಲ್ಲದೇ ಈ ಬಗ್ಗೆ ಗುಪ್ತಚರ ಇಲಾಖಾಯೂ ವರದಿಮಾಡಿದೆ ಎಂದು ಅವರು ಹೇಳಿದ್ದಾರೆ.
ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಅಬು ಖಾಸಿಮ್ನನ್ನು ಕಳೆದ ವಾರ ಅಧಿಕಾರಿಗಳು ಕೊಂದಿದ್ದು ಇದರಿಂದ ಬಂಡುಕೋರರ ಮತ್ತು ಭಯೋತ್ಪಾದಕರ ಕಾರ್ಯಾಚರಣೆಗೆ ಹಿನ್ನಡೆಯಾದಂತಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.