ಮಂಗಳೂರು : ರಾಜ್ಯದ ಹಿಂದುಳಿದ ವರ್ಗ, ಎಸ್.ಸಿ., ಎಸ್.ಟಿ., ವರ್ಗಕ್ಕೆ ಸೇರಿದ ಪ್ರಮುಖರ ಚಿಂತನಾ ಸಭೆ ಮತ್ತು ಅಂತ್ಯೋದಯ ಸಮಾವೇಶವನ್ನು ಬಿಜೆಪಿಯು ಮಂಗಳೂರಿನ ಸಂಘನಿಕೇತನದಲ್ಲಿ ಏರ್ಪಡಿಸಿತ್ತು.
ಅಹಿಂದದ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ., ಎಸ್.ಟಿ., ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದಂತಹ ಜನರಿಗೆ ಯಾವುದೇ ರೀತಿಯ ಪ್ರೋತ್ಸಾಹವಾಗಲಿ, ಉತ್ತೇಜನವಾಗಲಿ ಕೊಡುತ್ತಿರುವಂತೆ ಕಾಣುತ್ತಿಲ್ಲ. ರಾಜ್ಯದ ಬಜೆಟ್ನಲ್ಲಿ ನೀಡಿರುವ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ.
ಕೇಂದ್ರ ಸರಕಾರದ ಈ ವರ್ಗದ ಉನ್ನತಿಗೆ ಇರುವಂತಹ ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರಾಸಕ್ತಿ ವಹಿಸಿದೆ. ಅಲ್ಲದೇ ಈ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಸರಕಾರಗಳು ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳನ್ನು ಮತ್ತು ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಸಮಾವೇಶದಲ್ಲಿ ಮಂಡಿಸಲಾಯಿತು.
ಕಾರ್ಯಕ್ರಮದಲ್ಲಿ ವಿ. ಸುನೀಲ್ ಕುಮಾರ್ರವರು, ಹಿಂದುಳಿದ ವರ್ಗ ಮೋರ್ಚಾದ ರಾಜ್ಯಾಧ್ಯಕ್ಷರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ , ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಶ್ರೀರಾಮುಲು, ರೇವು ನಾಯಕ್ ಬೆಳಮಗಿ ಹಾಗೂ ಗೋವಿಂದ ಕಾರಜೋಳರವರು, ವಿಧಾನ ಪರಿಷತ್ತಿನ ಸದಸ್ಯರಾದ ಡಿ.ಎಸ್.ವೀರಯ್ಯ, ರಾಜ್ಯದ ಕಾರ್ಯದರ್ಶಿಗಳಾದ ರೇಖಾ ಹುಲಿಯಪ್ಪ ಗೌಡ ಹಾಗೂ ರಾಜ್ಯದ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.