ಉಡುಪಿ: ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಚಿತ್ರಕಲೆ ಸಹಕಾರಿ ಎಂದು ಸಿಂಡಿಕೇಟ್ ಬ್ಯಾಂಕ್ ಮಣಿಪಾಲದ ಕ್ಷೇತ್ರ ಮಹಾ ಪ್ರಬಂಧಕ ಕೆ.ಟಿ. ರೈ ಹೇಳಿದರು. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಉದಯವಾಣಿ ಮತ್ತು ಆರ್ಟಿಸ್ಟ್ಸ್ ಫೋರಂ ಕಲಾ ತಂಡ ಹಾಂಗ್ಯೋ ಐಸ್ಕ್ರೀಮ್, ಏಸ್ ಫುಡ್ಸ್ (ಮಾಡರ್ನ್ ಕಿಚನ್ಸ್) ಸಹಕಾರದಲ್ಲಿ ಅಂಬಲಪಾಡಿ ದೇಗುಲದ ಭವಾನಿ ಮಂಟಪದಲ್ಲಿ ರವಿವಾರ ಏರ್ಪಡಿಸಿದ “ಚಿಣ್ಣರ ಬಣ್ಣ-2015′ ಚಿತ್ರಕಲಾ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಚಿತ್ರಕಲೆ ಮಕ್ಕಳಲ್ಲಿ ಮನಸ್ಸಿನ ಏಕಾಗ್ರತೆಗೆ ಪೂರಕ. ಇದರಿಂದ ಸುಪ್ತವಾಗಿರುವ ಪ್ರತಿಭೆ ಹೊರಹೊಮ್ಮುತ್ತದೆ ಎಂದರು.
ತಮ್ಮ ಸಿಂಡಿಕೇಟ್ ಬ್ಯಾಂಕ್ಗೂ ಉದಯ ವಾಣಿಗೂ ಸಂಸ್ಥಾಪಕರ ಸಂಬಂಧವಿದ್ದು, ಇದು ಮುಂದುವರಿಯುತ್ತಿದೆ. ಉದಯವಾಣಿ ಮತ್ತು ಆರ್ಟಿಸ್ಟ್ಸ್ ಫೋರಂ ಉತ್ತಮ ಕೆಲಸ ನಿರ್ವಹಿಸುತ್ತಿದೆ ಎಂದು ರೈ ಶ್ಲಾಸಿದರು.
ಚಿತ್ರಕಲೆಯ ಮೂಲ ಉದ್ದೇಶ ಶ್ರೇಷ್ಠ ಚಿತ್ರಕಲಾಕಾರರಾಗಬೇಕೆಂದಲ್ಲ, ಅಂತರಾತ್ಮದಲ್ಲಿ ರುವ ಕಲ್ಪನೆಗೆ ಶಕ್ತಿ ಬರಬೇಕೆಂಬುದು ಉದ್ದೇಶ. ಮುಂದಿನ ವರ್ಷ ತಾಲೂಕು ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸುವ ಇರಾದೆ ಇದೆ ಎಂದು ಉದಯವಾಣಿ ನೇಶನಲ್ ಸೇಲ್ಸ್ ಹೆಡ್ (ಮ್ಯಾಗಜಿನ್ಸ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್) ರಾಮಚಂದ್ರ ಮಿಜಾರು ಹೇಳಿದರು.
ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಆರ್ಟಿಸ್ಟ್ಸ್ ಫೋರಂ ಗೌರವಾಧ್ಯಕ್ಷ ರಮೇಶ ರಾವ್, ಅಧ್ಯಕ್ಷ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಮೋಹನಕುಮಾರ್ ಪೆರ್ಮುದೆ, ರಾಜೇಂದ್ರ ಕೇದಗೆ ಪಾಲ್ಗೊಂಡಿದ್ದರು.
ಉದಯವಾಣಿ ಸಹ ಉಪಾಧ್ಯಕ್ಷ ಆನಂದ್ ಕೆ. ಸ್ವಾಗತಿಸಿದರು. ಫೋರಂ ಕಾರ್ಯದರ್ಶಿ ಸಕು ಪಾಂಗಾಳ ಕಾರ್ಯಕ್ರಮ ನಿರ್ವಹಿಸಿ ಖಜಾಂಚಿ ಹರಿಪ್ರಸಾದ್ ಕೆ. ವಂದಿಸಿದರು. ಸದಸ್ಯ ಪ್ರಸಾದ ರಾವ್ ಬಹುಮಾನಿತರ ಹೆಸರನ್ನು ವಾಚಿಸಿದರು. ಪ್ರಕಾಶ್ ರಾವ್ ಬಳಗದವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ಸ್ಪರ್ಧೆಯಲ್ಲಿ ಸುಮಾರು 600 ಮಕ್ಕಳು ಪಾಲ್ಗೊಂಡಿದ್ದರು. ಸ್ಪರ್ಧೆಯನ್ನು ತ್ರಿಪುರ ಸುಂದರಿ ಬಲ್ಲಾಳ್ ಉದ್ಘಾಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.