ಬೆಳ್ತಂಗಡಿ : ಹಿರಿಯ ಜನಪದ ಕಲಾವಿದ ಪಾಡ್ದನ ಕವಿ ಮಾಚಾರು ಗೋಪಾಲನಾಯ್ಕ ಅವರಿಗೆ ಎರಡನೇ ಬಾರಿಗೆ ಕನ್ನಡರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗುವ ಮೂಲಕ ಗೊಂದಲ ಮೂಡಿಸಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಹಿರಿಯ ಜಾನಪದ ವಿದ್ವಾಂಸ ಗೋಪಾಲನಾಯ್ಕರ ಹೆಸರೂ ಇತ್ತು.
ಆದರೆ ಅವರಿಗೆ ಈ ಹಿಂದೆ 2007 ರಲ್ಲಿಯೇ ರಾಜ್ಯ ಸರಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇವರ ಹೆಸರು ಮತ್ತೆ ಪ್ರಕಟಗೊಂಡಿರುವುದನ್ನು ಗಮನಿಸಿದ ಪರಿಚಿತರು ಈ ವಿಚಾರವನ್ನು ಅವರಿಗೆ ತಿಳಿಸಿದ್ದಾರೆ. ಶುಕ್ರವಾರ ರಾತ್ರಿಯೇ ಈ ವಿಚಾರವನ್ನು ತಾಲೂಕಿನ ಕೆಲ ಸಾಹಿತ್ಯ ವಲಯದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಗೋಪಾಲನಾಯ್ಕ ಅವರೂ ತಮಗೆ ಈ ಹಿಂದೆಯೇ ಪ್ರಶಸ್ತಿ ದೊರೆತಿರುವ ವಿಚಾರವನ್ನು ತಮ್ಮ ಪರಿಚಿತರ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಿಳಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಸಾಧನೆ ಮಾಡಿರುವ ಗೋಪಾಲ ನಾಯ್ಕ ಅವರು ಅತ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದು ಅವರಲ್ಲಿ ಒಂದು ಮೊಬೈಲ್ ಆಗಲಿ ಸ್ಥಿರ ದೂರವಾಣಿಯಾಗಲಿ ಇನ್ನೂ ಇಲ್ಲವಾಗಿದೆ.
ಅವರ ಮನೆಗೆ ತೆರಳಿದರೆ ಅವರು ಮನೆಯಿಂದ ಪ್ರಶಸ್ತಿ ಗೊಂದಲದ ಬಗ್ಗೆ ಮಾಹಿತಿ ಪಡೆಯಲು ಉಜಿರೆಗೆ ತೆರಳಿದ್ದರು. ಅವರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದು ಮನೆಯಲ್ಲಿರುವವರಿಗೆ ಪ್ರಶಸ್ತಿಗಳ ವಿಚಾರದ ಬಗ್ಗೆ ಯಾವುದೇ ಮಾಹಿತಿಗಳಿಲ್ಲವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.