ಕಾಠ್ಮಂಡು: ಭಾರತ-ನೇಪಾಳ ಗಡಿಯ ಮಿಥೇರಿ ಸೇತುವೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ನೇಪಾಳ ಪೊಲೀಸರು ಬಲವಂತವಾಗಿ ಎಬ್ಬಿಸಿದ್ದು ಈ ಮೂಲಕ 40 ದಿನಗಳಿಂದ ನಡೆಯುತ್ತಿದ್ದ ಬಂದ್ ಅಂತ್ಯಗೊಂಡಿದೆ.
ಕಳೆದ 40 ದಿನಗಳಿಂದ ಬೀರ್ಗಂಜ್-ರಕ್ಸಾಲ್ ಗಡಿ ದ್ವಾರದಲ್ಲಿ ಮಾಧೇಶಿ ಪ್ರತಿಭಟನಕಾರರು ತೇರಾಯಿ ಭಾಗದಲ್ಲಿ ವಾಸವಾಗಿರುವ ಭಾರತೀಯ ಮೂಲದ ಮಾಧೇಶಿ ಸಮುದಾಯದ ಜನರ ಹಿತಾಸಕ್ತಿಯನ್ನು ತಾವು ರಕ್ಷಿಸಲು ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು.
ಪ್ರತಿಭಟನಾಕಾರರನ್ನು ತೆರವುಗೊಳಿಸುತ್ತಿರುವ ಸಂದರ್ಭ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನಲಾಗಿದೆ. ಭಾರತ-ನೇಪಾಳ ಗಡಿಯನ್ನು ತೆರೆಯಲಾಗಿದ್ದು, 170ಕ್ಕೂ ಅಧಿಕ ಸರಕು ಸಾಗಣೆ ಟ್ರಕ್ಗಳು ನೇಪಾಳದಿಂದ ಭಾರತಕ್ಕೆ ಪ್ರವೇಶಿಸಿವೆ ಎಂದು ಕಾಠ್ಮಂಡು ಪೋಸ್ಟ್ ತಿಳಿಸಿದೆ.
ಶೇ.70ರಷ್ಟು ದ್ವಿಪಕ್ಷೀಯ ವಾಣಿಜ್ಯ ವ್ಯವಹಾರ ನಡೆಯುವ ಈ ಗಡಿ ಕೇಂದ್ರದಲ್ಲಿ ಪ್ರತಿಭಟನೆಯಿಂದಾಗಿ ಭಾರತದಿಂದ ನೇಪಾಳಕ್ಕೆ ಹೋಗುವ ಆವಶ್ಯಕ ಸರಕುಗಳ ಟ್ರಕ್ಗಳು ಹೋಗಲಾಗದೆ ನೇಪಾಳದಲ್ಲಿ ಆವಶ್ಯಕ ವಸ್ತುಗಳ ಕೊರತೆ ಉಂಟಾಗಿತ್ತು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.