ಬೆಳ್ತಂಗಡಿ : ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಲು ಇಂದು ಹೋರಾಟ ನಡೆಯುತ್ತಿರುವುದು ವಿಷಾದನೀಯ ಸಂಗತಿ ಎಂದು ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಯದುಪತಿ ಗೌಡ ಹೇಳಿದ್ದಾರೆ.ಅವರು ಭಾನುವಾರ ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಮಾತನಾಡಿದರು.
ಇತಿಹಾಸ ಇರುವ ಕನ್ನಡ ಭಾಷೆ ಕೇವಲ ಭಾಷೆಯಾಗಿರದೆ ಸಾಂಸ್ಕೃತಿಕ, ಸಂಸ್ಕಾರವನ್ನು ಉಳಿಸುವುದಾಗಿದೆ. ಇದೇ ರೀತಿಯಲ್ಲಿ ಕನ್ನಡ ಭಾಷೆ ಬೆಳೆದಿದ್ದು ಇದರೊಂದಿಗೆ ಇಂದು ಇತರ ಭಾಷೆಗಳು ಮೇಲುಗೈ ಸಾಧಿಸುತ್ತಿದೆ. ಕನ್ನಡವನ್ನು ಉಳಿಸಲು ಹೋರಾಟದ ಹಾದಿ ತುಳಿಯಬೇಕಾದ್ದು ವಿಷಾದನೀಯ. ಜಗತ್ತಿನಲ್ಲಿ ಯಾವ ಭಾಷೆಯೂ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಭಾಷೆಗಳಿಗೆ ಅದರದ್ದೇ ಆದ ಮಹತ್ವವಿದೆ. ಆಯಾಯ ಭಾಷೆಗೆ ಸೀಮಿತವಾದವರು ಪ್ರೀತಿಸಿ ಗೌರವಿಸಬೇಕು ಎಂದರು.
ತಾ. ಪಂ. ಅಧ್ಯಕ್ಷೆ ಜಯಂತಿ ಪಾಲೇದು ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕನ್ನಡಿಗರಾದ ನಾವು ಪ್ರಯತ್ನಿಸಬೇಕು ಎಂದರು. ಧಜ್ವಾರೋಹಣ ಮಾಡಿದ ತಹಶೀಲ್ದಾರ್ ಪ್ರಸನ್ನ ಕುಮಾರ್ ಮಾತನಾಡಿ ಭಾಷಾಭಿಮಾನ ಬಹಳ ಅಗತ್ಯವಾಗಿದ್ದು. ಅದರ ದುರುಪಯೋಗ ಮಾಡಬಾರದು. ಭಾಷೆಯನ್ನು ಉಳಿಸುವ ಜೊತೆಗೆ ಅದರ ಗೌರವವನ್ನು ಉನ್ನತ ಮಟ್ಟಕ್ಕೆ ಹೋಗುವಂತೆ ಪ್ರಯತ್ನಿಸಬೇಕು ಎಂದರು.
ನ.ಪಂ. ಅಧ್ಯಕ್ಷೆ ನಳಿನಿ ವಿಶ್ವನಾಥ್ ಉಪಸ್ಥಿತರಿದ್ದರು. ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಂತೇಶ್ ಸ್ವಾಗತಿಸಿ, ಶಿಕ್ಷಣ ಇಲಾಖೆಯ ಸುಭಾಶ್ ಯಾದವ್ ವಂದಿಸಿದರು. ಪತ್ರಕರ್ತ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.