ಕರ್ನಾಟಕ ಸರ್ಕಾರ ಇತ್ತೀಚಿಗೆ ಒಟ್ಟು 60 ಮಂದಿಯನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಲೆ, ಸಿನಿಮಾ, ಕ್ರೀಡೆ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಇದರಲ್ಲಿದ್ದಾರೆ. ಆದರೆ ವಿಶೇಷವೆಂದರೆ ತೃತೀಯ ಲಿಂಗಿಯೊಬ್ಬರು ಈ ಬಾರಿ ರಾಜ್ಯೋತ್ಸವ ಸನ್ಮಾನಕ್ಕೆ ಭಾಜನರಾಗಿದ್ದಾರೆ.
ಹುಡುಗನಾಗಿ ಹುಟ್ಟಿದ ಜಗದೀಶ್, ಬೆಳೆಯುತ್ತಾ ಬೆಳೆಯುತ್ತಾ ಹೆಣ್ಣಾಗಿ ಪರಿವರ್ತನೆಗೊಂಡು ಅಕ್ಕೈ ಪದ್ಮಶಾಲಿ ಎಂಬ ಹೆಸರನ್ನು ಪಡೆದರು. ಹೆಣ್ಣಿನಂತೆ ವರ್ತಿಸುವ ಇವರನ್ನು ಸಮಾಜ ದೂರವಿಟ್ಟಿತು. 12 ವಯಸ್ಸಿನಲ್ಲಿ ತನ್ನ ದೇಹಾಕೃತಿಯಿಂದ ಬೇಸತ್ತು ಆತ್ಮಹತ್ಯೆಗೂ ಇವರು ಪ್ರಯತ್ನಿಸಿದ್ದರು. ಆದರೆ ಮನಸ್ಸನ್ನು ಬದಲಾಯಿಸಿ ತನ್ನ ನಿಜ ರೂಪದಲ್ಲೇ ಸಮಾಜವನ್ನು ಎದುರಿಸಲು ನಿರ್ಧರಿಸಿದರು.
ಬಳಿಕ ತೃತೀಯ ಲಿಂಗಿಗಳ ಒಳಿತಿಗೆ ಶ್ರಮಿಸುವ ಸಂಗಮ ಎಂಬ ಸ್ಥಳೀಯ ಎನ್ಜಿಓಗೆ ಸೇರಿದ ಇವರು ಬಳಿಕ ‘ಒಂದೆಡೆ’ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಈ ಮೂಲಕ ಲೈಂಗಿಕತೆ, ಲಿಂಗ ವೈವಿಧ್ಯತೆ, ಲೈಂಗಿಕ ದೃಷ್ಟಿಕೋನದ ಹಕ್ಕು ಮುಂತಾದುವುಗಳ ಬಗ್ಗೆ ನಿರಂತರ ಅರಿವುಗಳನ್ನು ಮೂಡಿಸಿದರು.
ತೃತೀಯ ಲಿಂಗಿಗಳ ಹಕ್ಕಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಅವರು ನಾವೂ ನಾಗರಿಕರು ಎಂದು ಸಮಾಜಕ್ಕೆ ಅರ್ಥ ಮಾಡಿಕೊಡಲು ಅವಿರತ ಪ್ರಯತ್ನ ಪಡುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರ ಶ್ರಮಕ್ಕೆ ಸಿಕ್ಕ ಗೌರವ ಮಾತ್ರವಲ್ಲ, ಗೆಲುವೂ ಕೂಡ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.