ಬೆಳ್ತಂಗಡಿ: ವಿಷದ ಹಾವು ಕಚ್ಚಿ ಬಾಲಕ ಮೃತಪಟ್ಟ ಘಟನೆ ನಾಲ್ಕೂರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಗ್ರಾಮದ ಸೂಳಬೆಟ್ಟು ಎಂಬಲ್ಲಿನ ಅಮರೇಶ್ ಜೋಶಿ, ರಮ್ಯಾ ಜೋಶಿ ದಂಪತಿಯವರ ಎರಡನೇ ಪುತ್ರ ಸಮ್ಯಕ್(3) ಎಂಬ ಬಾಲಕನೇ ಮೃತಪಟ್ಟವನು. ಈತ ಸಂಜೆ ವೇಳೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಅಚಾನಕ್ ಆಗಿ ಹಾವು ಕಚ್ಚಿತ್ತು. ಕೂಡಲೇ ಸ್ಥಳೀಯ ವೈದ್ಯರಲ್ಲಿ ಮತ್ತು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮಗು ಮೃತಪಟ್ಟಿತು.
ಮೃತ ಬಾಲಕನ ಮನೆಗೆ ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲ, ಡಾ.ಶಶಿಧರ ಡೋಂಗ್ರೆ, ಪ್ರಕಾಶ್ ತುಳಪುಳೆ, ಸೀತಾರಾಮ ಹೆಬ್ಬಾರ್ಕಾಜಿಮುಗೇರು, ಪ್ರಸನ್ನ ಹೆಬ್ಬಾರ್, ಪ್ರಶಾಂತ ವೇಗಸ್, ಮೋಹನದಾಸ್, ಸುಭಾಶ್ಚಂದ್ರರೈ, ವಿಷ್ಣು ಮರಾಠೆ, ಅಪಾರ ಸಂಖ್ಯೆಯಲ್ಲಿ ಬಂದಊರ ನಾಗರಿಕರು ಭೇಟಿ ನೀಡಿ ಸಾಂತ್ವನ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.