ನವದೆಹಲಿ: ಅತ್ಯಧಿಕ ಅವಕಾಶವಿರುವ ಆಫ್ರಿಕಾ ದೇಶಗಳಲ್ಲಿ ಬಂಡವಾಳ ಹೂಡಲು ಮುಂದಾಗುವ ಭಾರತೀಯ ಕಂಪನಿಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಅಲ್ಲದೇ ಭಾರತದ ಬಂಡವಾಳದಾರರನ್ನು ಅದರಲ್ಲೂ ಪ್ರಮುಖವಾಗಿ ಉತ್ಪಾದನೆ ಮತ್ತು ಸಂಸ್ಕರಣೆ ಕೈಗಾರಿಕೆಗಳನ್ನು ಆಕರ್ಷಿಸಲು ಆಫ್ರಿಕಾ ದೇಶಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಭಾರತ-ಆಫ್ರಿಕಾ ಫೋರಂ ಸಮಿತ್ನ ಭಾಗವಾಗಿ ದೆಹಲಿಯಲ್ಲಿ ಬ್ಯುಸಿನೆಸ್ ಫೋರಂನ್ನು ಉದ್ಘಾಟಿಸಿ ಮಾತನಾಡಿದ ಸುಷ್ಮಾ, ವಿಸ್ತಾರ ಭೂಪ್ರದೇಶ, ಶ್ರೀಮಂತ ನೈಸರ್ಗಿಕ ಸಂಪನ್ಮೂಲ, ಯುವಜನಾಂಗ ಇರುವ ಆಫ್ರಿಕಾದಲ್ಲಿ ಅಪಾರ ಅವಕಾಶಗಳು ಇವೆ ಎಂಬ ಬಗ್ಗೆ ಭಾರತದ ಬಂಡವಾಳದಾರರಿಗೆ ಮಾಹಿತಿ ಇದೆ. ಆಫ್ರಿಕಾ ಈಗ ಆರ್ಥಿಕ ಮತ್ತು ತಾಂತ್ರಿಕ ಹೂಡಿಕೆ ಪ್ರಮುಖ ಕೇಂದ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಉದ್ಯಮಿಗಳು ನಿರಂತರವಾಗಿ ಆಫ್ರಿಕಾ ಖಂಡ ಮೂಲೆ ಮೂಲೆಗೆ ಪ್ರಯಾಣಿಸುತ್ತಿದ್ದು, ಹೊಸ ಉದ್ಯಮ ಮತ್ತು ಬಂಡವಾಳ ಅವಕಾಶಗಳನ್ನು ನೋಡುತ್ತಿದ್ದಾರೆ, ಭಾರತ ಸರ್ಕಾರ ಮತ್ತು ನಮ್ಮ ರಾಜ್ಯಗಳು ಅಂತಹ ಕ್ರಮಗಳನ್ನು ಪ್ರೇರೆಪಿಸುತ್ತದೆ ಮತ್ತು ಸ್ವಾಗತಿಸುತ್ತದೆ ಎಂದಿದ್ದಾರೆ.
ರೋಡ್ ಶೋನಂತಹ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಆಫ್ರಿಕಾ ದೇಶಗಳು ಭಾರತದ ಉದ್ಯಮಿಗಳನ್ನು ತನ್ನತ್ತ ಆಕರ್ಷಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಈ ಸಮಾರಂಭದಲ್ಲಿ ಆಫ್ರಿಕಾದ 54 ದೇಶಗಳ ನಾಯಕರುಗಳು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.