ಪಣಜಿ: ಟ್ರಯಲ್ ರೂಮ್ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಫ್ಯಾಬ್ ಇಂಡಿಯಾ’ ಶಾಪ್ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಎಪ್ರಿಲ್ 10ರಂದು ವಿಚಾರಣೆ ನಡೆಸುವುದಾಗಿ ಗೋವಾ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಫ್ಯಾಬ್ ಇಂಡಿಯಾದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸುಬ್ರತಾ ದತ್ತ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಲಿಯಮ್ ಬಿಸೆಲ್ ಅವರಿಗೆ ಮಂಗಳವಾರ ಹಾಜರಾಗುವಂತೆ ಸೂಚಿಸಿ ಗೋವಾ ಅಪರಾಧ ವಿಭಾಗದ ಪೊಲೀಸರು ಸಮನ್ಸ್ ನೀಡಿದ್ದರು. ಆದರೆ ಅವರು ಹಾಜರಾಗಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಲಾಗಿದೆ.
ಈ ಹಿನ್ನಲೆಯಲ್ಲಿ ‘ವಿಚಾರಣೆಗೆ ಶುಕ್ರವಾರ ಹಾಜರಾಗುವುದಾಗಿ ಫ್ಯಾಬ್ ಇಂಡಿಯಾದ ಸಿಇಒ ಹಾಗೂ ಎಂಡಿ ಹೇಳಿದ್ದಾರೆ’ ಎಂದು ಅಪರಾಧ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಾರ್ತೀಕ್ ಕಶ್ಯಪ್ ಅವರು ತಿಳಿಸಿದ್ದಾರೆ. ಅಲ್ಲದೇ, ‘ಫ್ಯಾಬ್ ಇಂಡಿಯಾ ಮಳಿಗೆಗೆ ಸಂಬಂಧಿಸಿದ ಇತರರನ್ನು ಇಂದು (ಬುಧವಾರ) ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಟೋರ್ ಮ್ಯಾನೇಜರ್ ಅವರನ್ನು ಪೊಲೀಸರು ಮಂಗಳವಾರ ವಿಚಾರಣೆ ನಡೆಸಿದ್ದರು. ಫ್ಯಾಬ್ ಇಂಡಿಯಾದ ಟ್ರಯಲ್ ರೂಮ್ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿರುವುದನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪತ್ತೆ ಹಚ್ಚಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.