ವಾಷಿಂಗ್ಟನ್: ರಾಜಕೀಯ ಮತ್ತು ಸಾಮಾಜಿಕ ವಲಯಗಳಿಂದ ಭಾರೀ ಸಾರ್ವಜನಿಕ ಬೆಂಬಲವಿದ್ದರೂ ಸಹ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ತಮ್ಮ ದೇಶದ ನಾಗರಿಕರ ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಕೆಲಸ ಮಾಡಿದ್ದಕ್ಕಾಗಿ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ.
ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದಾಗಿನಿಂದ, ರಾಜಕೀಯ ಪಕ್ಷಗಳು ಮತ್ತು ಅವರ ಮಿತ್ರಪಕ್ಷಗಳು ಅವರನ್ನು ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲು ಅತ್ಯಂತ ಅರ್ಹ ಅಭ್ಯರ್ಥಿಗಳಲ್ಲಿ ಒಬ್ಬರೆಂದು ಪ್ರಪಂಚದಾದ್ಯಂತ ಲಾಬಿ ಮಾಡುತ್ತಿದ್ದವು. ಪಾಕಿಸ್ತಾನಿ ನಾಯಕರು ಸಹ ಟ್ರಂಪ್ ಅವರನ್ನು ಬೆಂಬಲಿಸಿದ್ದರು.
ಇದನ್ನೇ ಮುಂದಿಟ್ಟುಕೊಂಡು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯನ್ನು ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ನೆಟಿಜನ್ಗಳು ಟ್ರಂಪ್ ಅವರನ್ನು ಅಪಹಾಸ್ಯ ಮಾಡುವ ಮೆಮೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲು ಆರಂಭಿಸಿದ್ದಾರೆ.
ಪಾಕಿಸ್ತಾನದಿಂದ ಡೊನಾಲ್ಡ್ ಟ್ರಂಪ್ಗೆ ನೋಬೆಲ್ ಸಿಗಲು ಸಾರ್ವಜನಿಕ ಬೆಂಬಲ ವ್ಯಕ್ತವಾಗಿದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ಮೆಮೆ ಟ್ರೆಂಡ್ಗೆ ಕಾರಣವಾಗಿದೆ. ಒಬ್ಬ ಬಳಕೆದಾರರು, “ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕಳೆದುಕೊಂಡ ನಂತರ, ಟ್ರಂಪ್ಗೆ ಹಿಲಾಲ್-ಎ-ಪಾಕಿಸ್ತಾನ್ ಪ್ರಶಸ್ತಿಯನ್ನು ನೀಡಲಾಗುವುದು” ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಏರಿಯಾ ಕೊರಿನಾ ಮಚಾದೊ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. ಏತನ್ಮಧ್ಯೆ, ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿಲ್ಲ. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ಥಾನವನ್ನು ರಕ್ಷಿಸುವಲ್ಲಿ ಅವರ ಪಾತ್ರಕ್ಕಾಗಿ ಪಾಕಿಸ್ಥಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಸಿಮ್ ಮುನೀರ್ ಅವರು ಟ್ರಂಪ್ ಅವರನ್ನು ನೋಬೆಲ್ಗೆ ನಾಮನಿರ್ದೇಶನ ಮಾಡಿದ್ದರು” ಎಂದು ಬರೆದಿದ್ದಾರೆ.
“ಯಾರಿಗಾದರೂ ಬಹುಮಾನ ಸಿಗದಿದ್ದಾಗ ಜಗತ್ತು ಹುರಿದುಂಬಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಆದರೆ ಹುಷಾರಾಗಿರು, ಪಾಕಿಸ್ತಾನವು ಡೊನಾಲ್ಡ್ ಟ್ರಂಪ್ ಅವರನ್ನು ವಿಜೇತ ಎಂದು ಘೋಷಿಸಬಹುದು” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
“ಮಾತುಕತೆ ನಡೆದರೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳನ್ನು ಎಂದಿಗೂ ಪರಿಹರಿಸಲು ಸಾಧ್ಯವಿಲ್ಲ. ನಿಮ್ಮ ಹೆಸರನ್ನು ಮೊಹಮ್ಮದ್ ಡೊನಾಲ್ಡ್ ಟ್ರಂಪ್ ಖಾನ್ ಎಂದು ಬದಲಾಯಿಸಿ” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಟ್ರಂಪ್ಗೆ ನೋಬೆಲ್ ಸಿಗದಿರುವುದು ಈಗ ದೊಡ್ಡ ಮಟ್ಟದಲ್ಲಿ ಅಪಹಾಸ್ಯವಾಗುತ್ತಿದೆ.
#NobelPeacePrize to #Mariacorina for promoting democratic rights for the people of #Venezuela .
After losing the Nobel Peace Prize, Trump will be awarded the Hilal-e-Pakistan Award.#donaldtrump #nobelprize2025 #NobelPeacePrize #trump pic.twitter.com/C4JG9T4LEW— pavitra samadhiya 🇮🇳 (@The_samadhiya) October 10, 2025
BREAKING: Maria Corina Machado has been awarded the Nobel Peace Prize 2025. 🏆✨
Meanwhile, Trump did not win the Nobel Peace Prize. He had been nominated by Pakistan’s Armed Forces Chief, Asim Munir, for his role in protecting 🇵🇰 during Operation Sindoor.#NobelPeacePrize pic.twitter.com/Oatzzx7oKv
— Wahida 🇦🇫 (@RealWahidaAFG) October 10, 2025
Have you ever seen the world cheer for someone not receiving a prize? 😉
But beware, Pakistan might just declare Donald Trump the winner. – It's all over social media #noblepeaceprize #tre— ishika (@ishikasoul12) October 10, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.