ನವದೆಹಲಿ: ಪಾಕಿಸ್ಥಾನದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ಆಗಮಿಸಿರುವ ೮೮ ಹಿಂದೂ ಕುಟುಂಬಗಳ ವೀಸಾ ಅವಧಿಯನ್ನು ಭಾರತ ಸರ್ಕಾರ ವಿಸ್ತರಣೆ ಮಾಡಿದೆ.
ಕಳೆದ ಎರಡು ತಿಂಗಳಿನಿಂದ ಈ ಕುಟುಂಬಗಳು ಭಾರತದಲ್ಲಿ ವಾಸಿಸುತ್ತಿವೆ. ಇವುಗಳಿಗೆ ಭಾರತ ತೊರೆಯುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಈ ಬಗ್ಗೆ ಕುಟುಂಬಗಳು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದವು. ಈ ಮನವಿಯ ಹಿನ್ನಲೆಯಲ್ಲಿ ಅವರ ವೀಸಾವನ್ನು 15 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.
ಈ ಕುಟುಂಬಗಳು ಮತ್ತೆ ಪಾಕಿಸ್ಥಾನಕ್ಕೆ ಮರಳಿ ಹೋಗಲು ಬಯಸುತ್ತಿಲ್ಲ. ಅಲ್ಲದೇ ಇಲ್ಲೇ ನೆಲೆಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿವೆ. ಪ್ರಸ್ತುತ ಜೈಪುರ ಗಜ್ರೂಪ್ ಸಾಗರ್ನಲ್ಲಿ ಈ ಕುಟುಂಬಗಳು ಟೆಂಟ್ ಹಾಕಿ ಜೀವನ ನಡೆಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.