ನವದೆಹಲಿ: ಮಂಗಳವಾರ ಕಾಂಗ್ರೆಸ್ ಪಕ್ಷವು ನಕಲಿ ಮತದಾರರ ಪಟ್ಟಿಯ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಬಿಹಾರ ನಿವಾಸಿ ಮಿಂಟಾ ದೇವಿಯ ಹೆಸರು ಮತ್ತು ಚಿತ್ರ ಬಳಸಿ ದೊಡ್ಡ ಸುದ್ದಿ ಮಾಡಿತ್ತು. ಆಕೆಯ ವಯಸ್ಸು 125 ಎಂದು ಆಕೆ ಬದುಕಿರಲು ಹೇಗೆ ಸಾಧ್ಯ ಎಂದು ಭಾರತೀಯ ಚುನಾವಣಾ ಆಯೋಗದ ಸ್ಪಷ್ಟನೆಯನ್ನು ಕೇಳಿತ್ತು.
ಪ್ರಿಯಾಂಕಾ ಗಾಂಧಿ ಮತ್ತು ಗೌರವ್ ಗೊಗೊಯ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಮಿಂಟಾ ದೇವಿಯ ಚಿತ್ರ ಮತ್ತು ಹೆಸರು ಇರುವ ಟಿ-ಶರ್ಟ್ಗಳನ್ನು ಧರಿಸಿದ್ದರು ಮತ್ತು ಟಿ ಶರ್ಟ್ ಹಿಂಭಾಗದಲ್ಲಿ ‘124 ನಾಟ್ ಔಟ್’ ಎಂದು ಬರೆಯಲಾಗಿತ್ತು. ಆ ಮಹಿಳೆಯನ್ನು 124 ವರ್ಷದ ಮತದಾರ ಎಂದು ನೋಂದಾಯಿಸಲಾಗಿದೆ, ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಗಿಂತ ಒಂಬತ್ತು ವರ್ಷ ಹಿರಿಯರು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಈ ಪ್ರತಿಭಟನೆಗಳು ಸಂಸತ್ತಿನ ಆವರಣವನ್ನು ಅಲುಗಾಡಿಸಿದ ಕೆಲವು ಗಂಟೆಗಳ ನಂತರ, ಸ್ವತಃ ಮಹಿಳೆ ಮಿಂಟಾ ದೇವಿ ಪ್ರತ್ಯಕ್ಷರಾಗಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಯದ್ವಾತದ್ವಾ ಟೀಕಾಸ್ತ್ರ ಪ್ರಯೋಗಿಸಿದ್ದಾರೆ, ನನ್ನ ಚಿತ್ರವಿರುವ ಟಿ-ಶರ್ಟ್ಗಳನ್ನು ಧರಿಸಲು ಅವರಿಗೆ ಯಾರು ಹಕ್ಕು ನೀಡಿದರು ಎಂದು ಪ್ರಶ್ನಿಸಿದ್ದಾರೆ.
“ವಿರೋಧ ಪಕ್ಷದ ಸಂಸದರು ನನಗೆ ಯಾರು? ಪ್ರಿಯಾಂಕಾ ಗಾಂಧಿ ಅಥವಾ ರಾಹುಲ್ ಗಾಂಧಿ ನನಗೆ ಯಾರು? ನನ್ನ ಚಿತ್ರದ ಟಿ-ಶರ್ಟ್ಗಳನ್ನು ಧರಿಸುವ ಹಕ್ಕನ್ನು ಅವರಿಗೆ ಯಾರು ಕೊಟ್ಟರು?” ಎಂದು ಮಿಂಟಾ ದೇವಿ ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ, ಮತದಾರರ ಪಟ್ಟಿಯಲ್ಲಿನ ವಿವರಗಳಲ್ಲಿ ವ್ಯತ್ಯಾಸಗಳಾಗಿವೆ ಎಂದು ಹೇಳಿರುವ ಅವರು ನನ್ನ ವಯಸ್ಸು 125 ಅಲ್ಲ, 35 ಎಂದಿದ್ದಾರೆ. ಅಲ್ಲದೇ ವಿವರಗಳಿಗೆ ತಿದ್ದುಪಡಿಗಳನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅವರ ಆಧಾರ್ ಕಾರ್ಡ್ ಪ್ರಕಾರ ಅವರ ಜನ್ಮ ದಿನಾಂಕ ಜುಲೈ 15, 1990. ಆದರೆ ತಪ್ಪಾಗಿ1900 ಎಂದು ನಮೂದಿಸಲಾಗಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ನ ಪ್ರತಿಭಟನೆಗಳ ವಿರುದ್ಧ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ ಮಿಂಟಾ ದೇವಿ, “ನನ್ನ ವಯಸ್ಸನ್ನು ಮುಂದಿಟ್ಟುಕೊಂಡು ಅವರು ಏಕೆ ನನ್ನ ಹಿತೈಷಿಗಳಾಗುತ್ತಿದ್ದಾರೆ?. ಇದನ್ನು ಮಾಡಬಾರದು, ನಾನು ಇದನ್ನು ಬಯಸುವುದಿಲ್ಲ. ನನ್ನ ವಿವರಗಳನ್ನು ಸರಿಪಡಿಸಬೇಕೆಂದು ನಾನು ಬಯಸುತ್ತೇನೆ” ಎಂದಿದ್ದಾರೆ.
ಅದೇನೆಯಿರಲಿ ಮಿಂಟಾ ದೇವಿ ಹೆಸರು ಬಳಸಿ ಚುನಾವಣಾ ಆಯೋಗವನ್ನು ದೂಷಿಸಲು ಹೊರಟ ಕಾಂಗ್ರೆಸ್ಗೆ ಈಗ ದೊಡ್ಡ ಕಪಾಳಮೋಕ್ಷವೇ ಆಗಿದೆ.
#WATCH | INDIA bloc MPs protested over SIR today by wearing T-shirts featuring the name Minta Devi, a voter allegedly listed as 124 years old in the EC's voter list.
In Siwan, Bihar, Minta Devi says, "…I came to know about this 2-4 days back…Who are they (Opposition MPs) to… pic.twitter.com/DiTUmvQXUj
— ANI (@ANI) August 12, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.