ಕೋಲ್ಕತ್ತಾ: ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಗೆ ಮಂಗಳವಾರ ರಾತ್ರಿ ಭರ್ಜರಿ ಚಾಲನೆ ಸಿಕ್ಕಿದೆ. ಮಳೆಗೆ ತುಸು ತಡವಾದರೂ ಸಾಲ್ಟ್ ಲೇಕ್ ಮೈದಾನದಲ್ಲಿ ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನೆರವೇರಿತು.
ಪ್ರೀತಂ ಚಕ್ರವರ್ತಿಯವರ ತಂಡ ಹಾಡಿದ ಬಂಗಾಳೀ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎಂಟು ತಂಡದ ಆಟಗಾರರನ್ನು ಆರಂಭದಲ್ಲೇ ವೇದಿಕೆ ಮೇಲೆ ಕರೆಯಲಾಯಿತು. ಬಳಿಕ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಐಪಿಎಲ್ ಟ್ರೋಫಿ ತಗೆದುಕೊಂಡು ಬರುವ ಮೂಲಕ ಟ್ರೋಫಿಯನ್ನು ಎಲ್ಲರಿಗೂ ಪ್ರದರ್ಶಿಸಿದರು. ಎಲ್ಲ ತಂಡದ ನಾಯಕರು ಬ್ಯಾಟ್’ಗೆ ಸಹಿ ಹಾಕಿದರು.
ಬಳಿಕ ಬಾಲಿವುಡ್ ತಾರೆಯರಾದ ಶಾಹಿದ್ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಹಲವಾರು ಬಂದು ಸಿನಿಮಾ ಗೀತೆಗಳಿಗೆ ಹೆಜ್ಜೆ ಹಾಕಿ ನೆರೆದಿದ್ದ 30 ಸಾವಿರ ಜನರಿಗೆ ಭರಪೂರ ಮನೋರಂಜನೆ ನೀಡಿದರು. ಬಳಿಕ ಐಪಿಎಲ್ ನಡೆದು ಬಂದ ಹಾದಿಯನ್ನು ದೃಶ್ಯಗಳ ಮೂಲಕ ಪರದೆಯ ಮೇಲೆ ತೋರಿಸಲಾಯಿತು.
ಬುಧವಾರದಿಂದ ಟೂರ್ನಿ ಅಧಿಕೃತವಾಗಿ ಆರಂಭವಾಗಿದ್ದು, ಮೊದಲ ಪಂದ್ಯ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.