ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದೀರ್ಘ ವ್ಯಾಪ್ತಿಯ ಗ್ಲೈಡ್ ಬಾಂಬ್ “ಗೌರವ್” ನ ರಿಲೀಸ್ ಟ್ರಯಲ್ಗಳನ್ನು ಸುಖೋಯ್ ವಿಮಾನದಿಂದ ಯಶಸ್ವಿಯಾಗಿ ನಡೆಸಿದೆ. “ಗೌರವ್” ಎಂಬುದು DRDO ನಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲ್ಪಟ್ಟ ಮತ್ತು ಅಭಿವೃದ್ಧಿಪಡಿಸಲಾದ 1,000 ಕೆಜಿ ವರ್ಗದ ಗ್ಲೈಡ್ ಬಾಂಬ್ ಆಗಿದ್ದು, ಏಪ್ರಿಲ್ 8 ರಿಂದ ಏಪ್ರಿಲ್ 10 ರವರೆಗೆ ಇದನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಎಲ್ಲಾ ಪ್ರಯೋಗಗಳಲ್ಲೂ ಈ ಬಾಂಬ್ ಹೆಚ್ಚು ನಿಖರತೆಯೊಂದಿಗೆ 100 ಕಿ.ಮೀ.ಗೆ ಹತ್ತಿರವಿರುವ ವ್ಯಾಪ್ತಿಯನ್ನು ಯಶಸ್ವಿಯಾಗಿ ತಲುಪಿವೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
“ಗೌರವ್” ನ ಯಶಸ್ವಿ ಅಭಿವೃದ್ಧಿ ಪ್ರಯೋಗಗಳಿಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ DRDO, ವಾಯುಸೇನೆ ಮತ್ತು ಸಂಬಂಧಪಟ್ಟ ಉದ್ಯಮ ಪಾಲುದಾರರನ್ನು ಶ್ಲಾಘಿಸಿದ್ದಾರೆ.
‘ಗೌರವ್ʼ ಯಶಸ್ವಿ ಪ್ರಯೋಗಗಳು ಭಾರತೀಯ ವಾಯುಪಡೆಯ ಬತ್ತಳಿಕೆಗೆ ಹೊಸ ಅತ್ಯಾಧುನಿಕ ಶಸ್ತ್ರಾಸ್ತ್ರವಾಗಿ ಹೊರಹೊಮ್ಮಿದೆ. ದೀರ್ಘ-ಶ್ರೇಣಿಯ ಗ್ಲೈಡ್ ಬಾಂಬ್ನ ಅಭಿವೃದ್ಧಿಯು ಸಶಸ್ತ್ರ ಪಡೆಗಳ ಸಾಮರ್ಥ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುತ್ತದೆ.
DRDO successfully conducted release trials of the 1000-kg class Long-Range Glide Bomb (LRGB) ‘Gaurav’ from Su-30 MKI between Apr 8-10, 2025. Achieving 100 km range with pinpoint accuracy, the indigenously developed weapon marks a major boost for #IAF’s strike capability.
Read… pic.twitter.com/H6aL9Huw0X
— Ministry of Defence, Government of India (@SpokespersonMoD) April 11, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.