ನವದೆಹಲಿ: ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು AI ಸಂಶೋಧಕ ಮತ್ತು ಪಾಡ್ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಮೂರು ಗಂಟೆಗಳ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಬಾಲ್ಯದ ಅನುಭವಗಳು, ಆರ್ಎಸ್ಎಸ್ ಕಾರ್ಯಕರ್ತನಾಗಿ ತಾವು ಕಳೆದ ಸಮಯ ಮತ್ತು ತಾನು ಆಚರಿಸುವ ಉಪವಾಸದ ಕುರಿತು ಸುದೀರ್ಘವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಲೆಕ್ಸ್ ಫ್ರಿಡ್ಮನ್ ಅವರು, ಮೋದಿಯೊಂದಿಗೆ ಸಂವಾದ ನಡೆಸುವ ಗೌರವಾರ್ಥವಾಗಿ ಎರಡು ದಿನಗಳಿಂದ ಉಪವಾಸ ಮಾಡುತ್ತಿದ್ದೇನೆ ಎಂಬುದನ್ನು ಬಹಿರಂಗಪಡಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. “ಎರಡು ದಿನಗಳಿಂದ ಕೇವಲ ನೀರು ಕುಡಿಯುತ್ತಿದ್ದೇ, ಆಹಾರ ಸೇವಿಸಿವಿಲ್ಲ. ಸರಿಯಾದ ಮನಸ್ಥಿತಿಗೆ ಬರಲು, ಆಧ್ಯಾತ್ಮಿಕ ಮಟ್ಟವನ್ನು ತಲುಪಲು ಈ ಉಪವಾಸ ನಡೆಸಿದ್ದೇನೆ” ಫ್ರಿಡ್ಮನ್ ಮೋದಿಗೆ ಹೇಳಿದ್ದಾರೆ.
ಎರಡು ದಿನಗಳ ನೀರಿನ ಉಪವಾಸದಲ್ಲಿರುವ ಫ್ರಿಡ್ಮನ್, ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಅವರದ ಉಪವಾಸ ಪದ್ಧತಿಗಳ ಬಗ್ಗೆ ಕೇಳಿದರು. ಇದಕ್ಕೆ ಉತ್ತರಿಸಿದ ಮೋದಿ, ಉಪವಾಸವು 50 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ಇದು ಕೇವಲ ಧಾರ್ಮಿಕ ಆಚರಣೆಯಾಗಿ ಮಾತ್ರವಲ್ಲದೆ ಆಂತರಿಕ ಶಿಸ್ತಿನ ವಿಧಾನವಾಗಿದೆ ಎಂದರು.
“ಉಪವಾಸವು ಕೇವಲ ಆಹಾರದಿಂದ ದೂರವಿರುವುದಲ್ಲ, ಅದಕ್ಕಿಂತಲೂ ಹೆಚ್ಚಿನದಾಗಿದೆ. ಇದು ಇಂದ್ರಿಯಗಳನ್ನು ಚುರುಕುಗೊಳಿಸುತ್ತದೆ, ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ ಮತ್ತು ಚಿಂತನೆಯನ್ನು ವೇಗಗೊಳಿಸುತ್ತದೆ. ಸಮತೋಲನ ಮತ್ತು ಸ್ವಯಂ-ಶಿಸ್ತಿಗೆ ನಾನು ಅದನ್ನು ಪ್ರಬಲ ಸಾಧನವಾಗಿ ನೋಡುತ್ತೇನೆ” ಎಂದು ಮೋದಿ ವಿವರಿಸಿದರು.
ಅವರು ನವರಾತ್ರಿಯ ಸಮಯದಲ್ಲಿ ಒಂಬತ್ತು ದಿನಗಳ ಕಾಲ ಊಟ ಮಾಡದೆ, ಬಿಸಿ ನೀರನ್ನು ಮಾತ್ರ ಸೇವಿಸುತ್ತಾರೆ. ಪಾಡ್ಕಾಸ್ಟ್ನಲ್ಲಿ ಅವರು ತಮ್ಮ ದೀರ್ಘಕಾಲದ ಉಪವಾಸದ ಅಭ್ಯಾಸದ ಬಗ್ಗೆ ಮಾತನಾಡಿದರು. ಉಪವಾಸದ ಹೊರತಾಗಿಯೂ, ಅವರು ವಿಶ್ವ ನಾಯಕರನ್ನು ಭೇಟಿ ಮಾಡುವುದು, ಆಡಳಿತವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೇರಿದಂತೆ ತಮ್ಮ ದೈನಂದಿನ ಜವಾಬ್ದಾರಿಗಳನ್ನು ಮುಂದುವರಿಸುವುದು ಎಲ್ಲರಲ್ಲೂ ಅಚ್ಚರಿ ತರುತ್ತದೆ.
PM Modi-Lex Fridman Duologue
Your senses become extra sharp, highly aware, and fully tuned in, and the capability to observe and respond multiplies…: PM @narendramodi talks about the significance of fasting
Courtesy: @lexfridman pic.twitter.com/ORG0P0i1sJ
— TIMES NOW (@TimesNow) March 16, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.