ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಪಾರ ಯುದ್ಧಗಳನ್ನು ಹುಟ್ಟು ಹಾಕಿದ್ದು, ಇದು ಜಾಗತಿಕ ಉದ್ವಿಗ್ನತೆಗೆ ಕಾರಂವಾಗುತ್ತಿದೆ ಎಂದು ಬಾಬಾ ರಾಮದೇವ್ ಅವರು ಆರೋಪಿಸಿದ್ದಾರೆ. ಅಲ್ಲದೇ ಈ ವಿಷಯದಲ್ಲಿ ‘ಭಾರತೀಯರು ಒಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.
“ಡೊನಾಲ್ಡ್ ಟ್ರಂಪ್ ಸುಂಕ ಭಯೋತ್ಪಾದನೆಯ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಬೆದರಿಕೆ ಹಾಕುವ ಮೂಲಕ ಅವರು ಪ್ರಜಾಪ್ರಭುತ್ವವನ್ನು ಕಿತ್ತುಹಾಕುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ರಾಮದೇವ್ ಹೇಳಿದ್ದಾರೆ.
‘ ಇದು ಬೌದ್ಧಿಕ ವಸಾಹತುಶಾಹಿ ಯುಗ’ ಎಂದು ಆರೋಪಿಸಿದ ಬಾಬಾ ರಾಮದೇವ್, ಡೊನಾಲ್ಡ್ ಟ್ರಂಪ್ 2025 ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಜಗತ್ತನ್ನು ವಿಭಿನ್ನ ಯುಗಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದ್ದಾರೆ.
“ಇಂತಹ ಸಂದರ್ಭದಲ್ಲಿ, ಭಾರತ ಅಭಿವೃದ್ಧಿ ಹೊಂದಬೇಕಾಗಿದೆ. ಎಲ್ಲಾ ಭಾರತೀಯರು ಬಲವಾದ ರಾಷ್ಟ್ರವನ್ನು ನಿರ್ಮಿಸಲು ಮತ್ತು ಈ ಎಲ್ಲಾ ವಿನಾಶಕಾರಿ ಶಕ್ತಿಗಳಿಗೆ ಉತ್ತರಿಸಲು ಒಂದಾಗಬೇಕು” ಎಂದು ಸಲಹೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತದ ಮೇಲೆ ನಿರ್ದಿಷ್ಟವಾಗಿ ಹೊಸ ಸುಂಕಗಳನ್ನು ವಿಧಿಸಿಲ್ಲ, ಆದರೂ ಅವರು ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಪರಸ್ಪರ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ, ಇವು ಏಪ್ರಿಲ್ 2025 ರಿಂದ ಜಾರಿಗೆ ಬರಲಿವೆ ಎಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಭಾರತದ ಹೆಚ್ಚಿನ ಸುಂಕಗಳನ್ನು ಟೀಕಿಸಿದ್ದಾರೆ, ವಿಶೇಷವಾಗಿ ಆಟೋಮೊಬೈಲ್ ಆಮದುಗಳ ಮೇಲೆ, ಇದು 100% ಕ್ಕಿಂತ ಹೆಚ್ಚು ಎಂದು ಅವರು ಹೇಳಿಕೊಂಡಿದ್ದಾರೆ.
#WATCH | Nagpur, Maharashtra | On US President Donald Trump imposing reciprocal tariffs, Yog guru Baba Ramdev says, "There is a new era of intellectual colonization. Amid this, ever since Donald Trump rose to power, he created a new world record of 'tariff terrorism'. He has… pic.twitter.com/aUgrVhm5pa
— ANI (@ANI) March 9, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.