ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಆದರೆ ಗಗನಕ್ಕೇರಿದ ವಿಮಾನಗಳ ಟಿಕೆಟ್ ಬೆಲೆಯಿಂದಾಗಿ ಅನೇಕರ ಮಹಾಕುಂಭ ಕನಸು ಕನಸಾಗಿಯೇ ಉಳಿದಿದೆ. ಇದನ್ನು ಅರಿತ ಸರ್ಕಾರ ಇದೀಗ ಕುಂಭ ಮೇಳಕ್ಕೆ ತೆರಳುವವರಿಗೆ ವಿಮಾನ ಟಿಕೆಟ್ ದರಗಳು ಅರ್ಧದಷ್ಟು ಇಳಿಕೆ ಮಾಡಿದೆ.
ಪ್ರಯಾಗ್ ರಾಜ್ಗೆ ತೆರಳುತ್ತಿರುವ ವಿಮಾನಯಾನ ಸಂಸ್ಥೆಗಳ ಟಿಕೆಟ್ ದರ ಏರಿಕೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ ಟಿಕೆಟ್ ದರ ಕಡಿತಗೊಳಿಸಲು ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಿದೆ. ಟಿಕೆಟ್ ದರ ಮಿತಿಯಲ್ಲಿರಿಸುವಂತೆ ತಿಳಿಸಿದೆ.
ಸರ್ಕಾರದ ಸೂಚನೆಯಿಂದಾಗಿದೆ ವಿಮಾನಯಾನ ಟಿಕೆಟ್ ದರವನ್ನು 30 ರಿಂದ 50% ರಷ್ಟು ಕಡಿಮೆ ಮಾಡಲಾಗಿದೆ. ಹೀಗಾಗಿ ಮಹಾಕುಂಭ ಮೇಳಕ್ಕೆ ತೆರಳಲು ಬಯಸುತ್ತಿರುವ ಮಧ್ಯಮವರ್ಗದ ಜನರಿಗೆ ನಿರಾಳತೆ ದೊರೆತಿದೆ.
ಮಹಾಕುಂಭ ಮೇಳ ಪ್ರಾರಂಭವಾದಗಿನಿಂದಲೂ ಪ್ರಯಾಗ್ರಾಜ್ ವಿಮಾನಗಳ ಏರ್ ಟಿಕೆಟ್ ದರಗಳು ಗಣನೀಯವಾಗಿ ಏರಿದೆ. ವಿಶೇಷವಾಗಿ ಮೌನಿ ಅಮವಾಸ್ಯೆಯಂದು ಅತೀ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದರಿಂದ ಟಿಕೆಟ್ ಬೆಲೆ ಕೂಡ ಹೆಚ್ಚಾಗಿತ್ತು. ಇದು ಜನರಿಗೆ ನಿರಾಶೆ ತಂದಿತ್ತು.
ಕುಂಭಮೇಳಕ್ಕೆ ಆರ್ ಎಸ್ ಎಸ್ ಸಹಾಯವಾಣಿ
ಕುಂಭಮೇಳಕ್ಕೆ ಹೊರಡಲು ತಯಾರಾಗಿರುವ ಸಂಘದ ಸ್ವಯಂಸೇವಕರು, ಹಿತೈಷಿಗಳು ಫೆಬ್ರವರಿ 6 ರ ನಂತರವೇ ಕುಂಭಮೇಳಕ್ಕೆ ಬರಲು ಮನವಿ ಮಾಡಲಾಗಿದೆ. ಕಳೆದೆರಡು ದಿನಗಳಿಂದ ಅತಿಯಾದ ಜನಸಂದಣಿಯ ಕಾರಣಕ್ಕಾಗಿ ಈ ವಿಶೇಷ ಮನವಿಯನ್ನು ಮಾಡಲಾಗಿದೆ. ಕುಂಭಮೇಳಕ್ಕೆ ಬರಲು ಇಚ್ಛಿಸುವವರು ಸಹಾಯಕ್ಕಾಗಿ ಕಾಶಿ ಪ್ರಾಂತದ ಕಾರ್ಯಕರ್ತರನ್ನು ಸಂಪರ್ಕಿಸಬಹುದು.
ಶ್ರೀ ರಾಕೇಶ್ ತಿವಾರಿ, ಸಹ ಪ್ರಾಂತ ಕಾರ್ಯವಾಹ, ಕಾಶಿ ಕೇಂದ್ರ : 9454940375
ಶ್ರೀ ಆದಿತ್ಯ, ವಿಭಾಗ ಪ್ರಚಾರಕರು, ಪ್ರಯಾಗ : 9452433932
ಶ್ರೀ ಮುಕೇಶ್, ಭಾಗ ಕಾರ್ಯವಾಹ, ಕುಂಭಮೇಳ ಕ್ಷೇತ್ರ : 9450502262
ಶ್ರೀ ಮನೋಜ್, ಭಾಗ ಕಾರ್ಯವಾಹ, ಪ್ರಯಾಗ್ ಜಂಕ್ಷನ್ ಸ್ಟೇಷನ್ ಕ್ಷೇತ್ರ : 9307025992
ಶ್ರೀ ಪ್ರೇಮಸಾಗರ್, ಜಿಲ್ಲಾ ಪ್ರಚಾರಕ್, ಗಂಗಾಪಾರ್, ಪಡೋಸಾ ಜಿಲ್ಲೆ, ಅಯೋಧ್ಯೆ ಮತ್ತು ಲಕ್ನೋದಿಂದ ಬರಲು ಇಚ್ಛಿಸುವವರು: 9889800307
ಶ್ರೀ ಅಜಯ್, ವಿಭಾಗ ಬೌದ್ಧಿಕ್ ಪ್ರಮುಖ್, ನೈನಿ ಮತ್ತು ಅರೆಲ್ ಕ್ಷೇತ್ರ: 9838599503
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.