ಶಿಲ್ಲಾಂಗ್: ಮೇಘಾಲಯ ಸರ್ಕಾರವು ತಮ್ಮ ರಾಜ್ಯದ ಮಕ್ಕಳಿಗೆ ಆಟ ಆಧಾರಿತ ಕಲಿಕೆಯನ್ನು ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.
ತುರಾದ ದೋಬಕ್ಕೋಲ್ನಲ್ಲಿ ಮಾದರಿ ಸೃಜನಶೀಲ ಕಲಿಕಾ ಕೇಂದ್ರ (MCLC) ಉದ್ಘಾಟಿಸಿ ಮಾತನಾಡಿದ ಅವರು, “ಮಗುವಿಗೆ ಆಟ ಆಧಾರಿತ ಕಲಿಕೆಯನ್ನು ಪರಿಚಯಿಸುವುದು ಮುಖ್ಯ, ಇದು ಅವರ ಗ್ರಹಿಕೆ, ಅರಿವಿನ ಮತ್ತು ಸ್ವಯಂ ನಿಯಂತ್ರಣ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು.
ಬಾಲ್ಯದ ಅಭಿವೃದ್ಧಿ (ECD) ಧ್ಯೇಯದಡಿಯಲ್ಲಿ, ರಾಜ್ಯಾದ್ಯಂತ ಮಕ್ಕಳಿಗಾಗಿ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
MCLC ಅನ್ನು ಪ್ರಾರಂಭಿಸಲು ಸಹಕರಿಸಿದ್ದಕ್ಕಾಗಿ ಮೇರೆ ಮೆಂಟರ್ ಮತ್ತು ದೋಬಕ್ಕೋಲ್ ಸರ್ಕಾರೇತರ LP ಶಾಲೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿ, “ರಾಜ್ಯ ಸರ್ಕಾರವು ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಿದೆ ಆದರೆ ಅದು ಕ್ರಿಯಾತ್ಮಕವಾಗುವಂತೆ ನೋಡಿಕೊಳ್ಳುವುದು ಸಂಸ್ಥೆಯ ಸಾಮೂಹಿಕ ಜವಾಬ್ದಾರಿಯಾಗಿರುತ್ತದೆ” ಎಂದು ಹೇಳಿದರು.
ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ನಿಧಿ (CMSDF) ಅಡಿಯಲ್ಲಿ ಯೋಜನೆಗೆ 50 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಯಿತು. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಚಟುವಟಿಕೆ ಮತ್ತು ಆಟ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಮುಖ್ಯಮಂತ್ರಿಯವರ ಪ್ರಮುಖ ಉಪಕ್ರಮವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.