ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಕಳೆದ ವರ್ಷ ನವೆಂಬರ್ನಲ್ಲಿ 14 ಲಕ್ಷ 63 ಸಾವಿರ ಸದಸ್ಯರನ್ನು ಸೇರಿಸಿಕೊಂಡಿದೆ. ಇದು ಅಕ್ಟೋಬರ್ 2024 ಕ್ಕೆ ಹೋಲಿಸಿದರೆ ನಿವ್ವಳ ಸದಸ್ಯರಲ್ಲಿ ಶೇ. 9.07 ರಷ್ಟು ಹೆಚ್ಚಳವಾಗಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಏರಿಕೆಗೆ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಉದ್ಯೋಗಿ ಸೌಲಭ್ಯಗಳ ಬಗ್ಗೆ ಹೆಚ್ಚಿದ ಅರಿವು ಮತ್ತು ಇಪಿಎಫ್ಒನ ಯಶಸ್ವಿ ಸಂಪರ್ಕ ಕಾರ್ಯಕ್ರಮಗಳು ಕಾರಣ ಎಂದು ಹೇಳಿದೆ.
ಇಪಿಎಫ್ಒ ಪ್ರಕಾರ, ಕಳೆದ ವರ್ಷ ನವೆಂಬರ್ನಲ್ಲಿ ಸುಮಾರು 8 ಲಕ್ಷ 74 ಸಾವಿರ ಹೊಸ ಸದಸ್ಯರನ್ನು ಸೇರಿಸಲಾಗಿದೆ. ಹೊಸ ವೇತನದಾರರ ದತ್ತಾಂಶವು 18 ರಿಂದ 25 ವರ್ಷ ವಯಸ್ಸಿನ 4ಲಕ್ಷ 81 ಸಾವಿರ ಹೊಸ ಸದಸ್ಯರನ್ನು ಸೇರಿಸಲಾಗಿದೆ ಎಂದು ತೋರಿಸುತ್ತದೆ. ನವೆಂಬರ್ 2024 ರಲ್ಲಿ ಸುಮಾರು 2 ಲಕ್ಷ 40 ಸಾವಿರ ಹೊಸ ಮಹಿಳಾ ಸದಸ್ಯರನ್ನು ಸೇರಿಸಲಾಗಿದೆ ಎಂದು ದತ್ತಾಂಶವು ಬಹಿರಂಗಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.