ನವದೆಹಲಿ: 2025 ಇಸ್ರೋಗೆ ಅತ್ಯಂತ ಬ್ಯೂಸಿ ಕ್ಯಾಲೆಂಡರ್ ವರ್ಷವಾಗಿರಲಿದೆ ಎಂದು ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯ ಮೂಲಕ 2024 ರಲ್ಲಿ ಭಾರತದ ಬಾಹ್ಯಾಕಾಶ ಸಾಧನೆಗಳ ಪಟ್ಟಿಯನ್ನು ಸಚಿವರು ಮುಂದಿಟ್ಟಿದ್ದಾರೆ. ಅಲ್ಲದೇ ಮುಂಬರುವ ಉಡಾವಣೆಗಳ ಬಗ್ಗೆ ವಿವರಗಳನ್ನು ನೀಡಿದ್ದಾರೆ.
ಹೊಸ ವರ್ಷದ ಮೊದಲಾರ್ಧದಲ್ಲಿ ಅರ್ಧ ಡಜನ್ ದೊಡ್ಡ ಮಿಷನ್ಗಳನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧವಾಗಿದೆ. ಗಗನಯಾನ ಮಾನವಸಹಿತ ಮಿಷನ್ಗೆ ಮುನ್ನುಡಿಯಾಗಿ ಬಾಹ್ಯಾಕಾಶಕ್ಕೆ ಮಹಿಳಾ ರೋಬೋಟ್ ಕಳುಹಿಸಲಿದೆ ಮತ್ತು ವಿಶ್ವದ ಅತ್ಯಂತ ದುಬಾರಿ ಇಂಡೋ-ಯುಎಸ್ ಸಹ-ನಿರ್ಮಾಣದ ಅರ್ಥ್ ಇಮೇಜಿಂಗ್ ಉಪಗ್ರಹ NISAR ಅನ್ನು ಉಡಾವಣೆ ಮಾಡಲಿದೆ.
ಇಸ್ರೋ ಮೊದಲು ಸುಧಾರಿತ ನ್ಯಾವಿಗೇಷನ್ ಉಪಗ್ರಹ NVS-02 ಅನ್ನು ಜನವರಿಯಲ್ಲಿ ಉಡಾವಣೆ ಮಾಡಲಿದೆ. GSLV ಉಡಾವಣೆಯು ಇಸ್ರೋದ 100 ನೇ ಮಿಷನ್ ಅನ್ನು ಗುರುತಿಸುತ್ತದೆ. ಅದರ ನಂತರ, ಇಸ್ರೋ ಮಾನವರಹಿತ ಗಗನಯಾನ ಮಿಷನ್ನ ಭಾಗವಾಗಿ ಇಸ್ರೋ ನಿರ್ಮಿಸಿದ ಮಹಿಳಾ ಹ್ಯುಮನಾಯ್ಡ್ ವ್ಯೋಮಿತ್ರವನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ. ಇದು ಮಾನವಸಹಿತ ಕಾರ್ಯಾಚರಣೆಗೆ ಮುನ್ನುಡಿ ಬರೆಯುತ್ತದೆ . “ವ್ಯೋಮಿತ್ರ ಮಿಷನ್ನಲ್ಲಿ ಎಲ್ಲವೂ ಸರಿಯಾಗಿ ನಡೆದರೆ, ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು” ಎಂದು ಸಚಿವರು ಹೇಳಿದರು.
ಇಂಡೋ-ಯುಎಸ್ ಜಂಟಿ ಮಿಷನ್ ನಾಸಾ-ಇಸ್ರೋ SAR (NISAR) ಉಪಗ್ರಹವನ್ನು 12,505 ಕೋಟಿ ರೂಪಾಯಿಗಳ ವಿಶ್ವದ ಅತ್ಯಂತ ದುಬಾರಿ ಉಪಗ್ರಹವೆಂದು ಪರಿಗಣಿಸಲಾಗಿದ್ದು, ಮಾರ್ಚ್ನಲ್ಲಿ ಉಡಾವಣೆ ಮಾಡಲಾಗುವುದು ಎಂದು ಅವರು ಹೇಳಿದರು. “ಈ ಉಪಗ್ರಹವು ಪ್ರತಿ 12 ದಿನಗಳಿಗೊಮ್ಮೆ ಎಲ್ಲಾ ಭೂಮಿ ಮತ್ತು ಮಂಜುಗಡ್ಡೆಯನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಹೆಚ್ಚಿನ ರೆಸಲ್ಯೂಶನ್ ಹೊಂದಿರುತ್ತದೆ” ಎಂದು ಸಚಿವರು ಹೇಳಿದರು.
1969 ರಲ್ಲಿ ಅಮೇರಿಕಾ ಚಂದ್ರನತ್ತ ಮನುಷ್ಯರನ್ನು ಕಳುಹಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ ಇಸ್ರೋ ಜನಿಸಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಇಸ್ರೋ ಯುಎಸ್ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ ಎಂದಿದ್ದಾರೆ. ಅಮೆರಿಕದ ಗ್ರಾಹಕರಿಗಾಗಿ ಮುಂಬರುವ ವಾಣಿಜ್ಯ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಲಿದೆ, ಈ ಉಪಗ್ರಗಳನ್ನು ಮೊಬೈಲ್ ಸಂವಹನಕ್ಕಾಗಿ ಬಳಸಲಾಗುತ್ತದೆ. “ನಾವು ಅಂತರರಾಷ್ಟ್ರೀಯ ಗ್ರಾಹಕರಿಗಾಗಿ ಮೊದಲ ತ್ರೈಮಾಸಿಕದಲ್ಲಿ LVM3-M5 ಮಿಷನ್ ಅನ್ನು ಉಡಾವಣೆ ಮಾಡಲಿದ್ದೇವೆ. ಭಾರತವು ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಯುಎಸ್ಗೆ ನೇರ ಮೊಬೈಲ್ ಸಂವಹನಕ್ಕಾಗಿ ಉಪಗ್ರಹವನ್ನು ಉಡಾವಣೆ ಮಾಡುತ್ತಿದೆ, ಇದು ನಮ್ಮ ವಿಕಸನ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ”ಎಂದು ಸಚಿವರು ಹೇಳಿದರು.
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾತನಾಡಿ, “ಹೊಸ ವರ್ಷದಲ್ಲಿ ಇಸ್ರೋ ನಾಲ್ಕು ಜಿಎಸ್ಎಲ್ವಿ ರಾಕೆಟ್ಗಳು ಮತ್ತು ಮೂರು ಪಿಎಸ್ಎಲ್ವಿ ಉಡಾವಣೆ ಮತ್ತು ಎಸ್ಎಸ್ಎಲ್ವಿ ಉಡಾವಣೆ ಮಾಡಲಿರುವುದರಿಂದ 2025 ಬಹಳ ರೋಮಾಂಚಕಾರಿ ವರ್ಷವಾಗಲಿದೆ” ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.