ಕೊಚ್ಚಿ: ಮಾಲಿವುಡ್ ನಟಿ ದಿವ್ಯಾ ಉನ್ನಿ ಅವರು ಸುಮಾರು 11,600 ಭರತನಾಟ್ಯ ನೃತ್ಯಗಾರರ ತಂಡವನ್ನು ಮುನ್ನಡೆಸಿ ಭರತನಾಟ್ಯ ಪ್ರದರ್ಶಿಸುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ಗಮನಾರ್ಹ ಪ್ರದರ್ಶನದ ಮೂಲಕ ಅವರು ಗಿನ್ನೆಸ್ ವಿಶ್ವ ದಾಖಲೆಯ ಪುಟ ಸೇರಿದ್ದಾರೆ.
ಡಿಸೆಂಬರ್ 29, ಭಾನುವಾರ ಕೊಚ್ಚಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಈ ಬೃಹತ್ ‘ಮೃದಂಗ ನಾದಂ’ ಎಂಬ ಭರತನಾಟ್ಯ ಪ್ರದರ್ಶನ ನಡೆದಿದೆ. ಈ ಮೂಲಕ ದಿವ್ಯಾ ಉನ್ನಿ ಮತ್ತು ಅವರ ತಂಡ ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದೆ. ಹಿಂದೆ 10,176 ನೃತ್ಯಗಾರರು ಭರತನಾಟ್ಯ ಪ್ರದರ್ಶಿಸಿದ ದಾಖಲೆ ಇತ್ತು.
ಈ ಭರತನಾಟ್ಯ ಪ್ರದರ್ಶನದಲ್ಲಿ 550 ನೃತ್ಯ ಶಿಕ್ಷಕರು ಪ್ರಪಂಚದಾದ್ಯಂತದಿಂದ ಬಂದಿದ್ದರು. ಪ್ಯಾರಿಸ್ ಲಕ್ಷ್ಮಿ, ವಿದ್ಯಾ ಉನ್ನಿ, ಉತ್ತರಾ ಉನ್ನಿ ಮುಂತಾದ ಹಲವಾರು ನಟ ಮತ್ತು ಡ್ಯಾನ್ಸರ್ಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 7 ವರ್ಷದ ಮಕ್ಕಳು ಸಹ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಅವಘಢವೊಂದು ಸಂಭವಿಸಿದೆ. 15 ಅಡಿ ಎತ್ತರದ ಬ್ಯಾರಿಕೇಡ್ ಗ್ಯಾಲರಿಯಿಂದ ಬಿದ್ದು ತೃಕ್ಕಾಕರ ಶಾಸಕಿ ಉಮಾ ಥಾಮಸ್ ಗಂಭೀರವಾಗಿ ಗಾಯಗೊಂಡಿದ್ದರಿಂದ ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ‘ಮೃದಂಗ ನಾದಂ’ ಕಾರ್ಯಕ್ರಮವನ್ನು ನಡೆಸಿದ ಸಂಘಟಕರ ವಿರುದ್ಧ ಪಲರಿವಟ್ಟಂ ಪೊಲೀಸರು ಇದೀಗ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.