ನವದೆಹಲಿ: ಕಳೆದ ಎರಡು ವರ್ಷಗಳಿಂದ ಭಾರತದ ರೈಲು ಹಳಿಗಳಲ್ಲಿ ಹಳಿ ತಪ್ಪಿಸುವ ಕೆಲಸ ವಿಪರೀತವಾಗಿ ನಡೆಯುತ್ತಿದೆ. ಇತ್ತೀಚೆಗಂತೂ ಈ ಸಂಖ್ಯೆ ದುಪ್ಪಾಟ್ಟಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಇದರ ಹಿಂದಿರುವ ಉದ್ದೇಶ ಏನಿರಬಹುದೆಂದು ಹಲವು ಪ್ರಶ್ನೆಗಳೂ ಜನರನ್ನು ಕಾಡತೊಡಗಿತ್ತು, ಈ ಕೃತ್ಯಗಳ ಹಿಂದೆ ದೇಶದ್ರೋಹಿಗಳ ಕೈವಾಡ ಇರಬಹುದೇ? ಭಯೋತ್ಪಾದಕರ ಕೈವಾಡ ಇರಬಹುದೇ ಅಥವಾ ಮಕ್ಕಳಾಟವಾಗಿರಬಹುದೇ ಎಂಬ ಹಲವು ಪ್ರಶ್ನೆಗಳು ದೇಶವಾಸಿಗಳನ್ನು ಗಾಢವಾಗಿ ಕಾಡತೊಡಗಿತ್ತು.
ಇತ್ತೀಚಿನ ದಿನಗಳಲ್ಲಿ ದೇಶದ ರೈಲು ಹಳಿಗಳ ಮೇಲೆ ಸಿಲಿಂಡರ್, ಮರದ ದಿಮ್ಮಿಗಳು, ಮಣ್ಣಿನ ರಾಶಿ ಸೇರಿದಂತೆ ಕೆಲವು ವಸ್ತುಗಳನ್ನು ಇಟ್ಟು ಹಳಿ ತಪ್ಪಿಸುವ ಪ್ರಯತ್ನ ನಡೆದಿದ್ದವು. ಅಲ್ಲದೆ ಕೆಲವೆಡೆ ಹಳಿ ತಪ್ಪಿದ್ದ ಘಟನೆಗಳೂ ವರದಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಆಘಾತಕಾರಿ ಮಾಹಿತಿಯನ್ನ ಬಹಿರಂಗ ಪಡಿಸಿದೆ. ತಮ್ಮ ಜಂಟಿ ಕಾರ್ಯಾಚರಣೆಯಲ್ಲಿ ಮಹತ್ವದ ಮಾಹಿತಿಯನ್ನು ಪತ್ತೆಹಚ್ಚಿರುವ ಎನ್ ಐಎ ಮತ್ತು ಎಟಿಎಸ್ , ರೈಲು ಹಳಿಗಳನ್ನು ತಪ್ಪಿಸಲು ಮದರಸಾಗಳಲ್ಲಿ ತರಬೇತಿಗಳನ್ನ ನೀಡಲಾಗುತ್ತಿದೆ ಎಂಬುದನ್ನು ಪ್ರಕಟಿಸಿದೆ.
ಉತ್ತರ ಪ್ರದೇಶದ ಝಾನ್ಸಿ ಮತ್ತು ಕಾನ್ಸುರದ ಕೆಲವು ಮದರಸಾಗಳಲ್ಲಿ ರೈಲು ಹಳಿ ತಪ್ಪಿಸಲು ತರಬೇತಿಗಳನ್ನು ನೀಡಲಾಗುತ್ತಿತ್ತು. ಮದರಸಾಕ್ಕೆ ಬರುವ ವಿದ್ಯಾರ್ಥಿಗಳನ್ನು ಮತಾಂಧರನ್ನಾಗಿ ಮಾಡಿ ಅದಾದ ಬಳಿಕ ಅವರಿಗೆ ಹೇಗೆ ಹಳಿ ತಪ್ಪಿಸಬುದೆಂದು ಹೇಳಿಕೊಡಲಾಗುತ್ತಿತ್ತು. ರೈಲು ಹಳಿ ತಪ್ಪಬಹುದಾದ ವಿಧಾನಗಳನ್ನು ಅವರಿಗೆ ಹೇಳಿಕೊಟ್ಟು ಅವರಿಂದ ರೈಲು ಹಳಿ ತಪ್ಪಿಸುವ ಕೃತ್ಯ ಮಾಡಿಸಲಾಗುತ್ತಿತ್ತು ವಿದ್ಯಾರ್ಥಿಗಳು ಮಾತ್ರವಲ್ಲದೆ ಯುವಕರನ್ನೂ ಈ ಕೃತ್ಯಗಳನ್ನು ಬಳಸಿಕೊಳ್ಳಲಾಗಿತ್ತು ಎಂಬುದನ್ನು ತನಿಖೆಯಿಂದ ಬಹಿರಂಗ ಪಡಿಸಿದೆ.
ಆನ್ ಲೈನ್ ಹಾಗೂ ಭೌತಿಕ ತರಗತಿಗಳ ಮೂಲಕ ಮತಾಂಧರಿಗೆ ತರಭೇತಿಯನ್ನು ನೀಡಲಾಗುತ್ತಿತ್ತು. ಆನ್ ಲೈನ್ ಮೂಲಕ ತರಬೇತಿ ನೀಡಿದ ಹಲವು ವೀಡಿಯೋಗಳನ್ನು ಎನ್ ಐ ಎ ವಶಪಡಿಸಿಕೊಂಡಿದೆ. ಇನ್ನು ಈ ಎಲ್ಲಾ ಕೃತ್ಯಗಳ ಹಿಂದೆ ಮದರಸಾದ ಶಿಕ್ಷಕ ಮುಪ್ತಿ ಖಾಲೀದ್ ನದ್ದಿಯ ಕೈವಾಡ ಇದೆ ಎಂಬುದನ್ನು ಅರಿತುಕೊಂಡು ಆತನನ್ನು ವಶಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಈ ಕೃತ್ಯಗಳಿಗಾಗಿ ವಿದೇಶದಿಂದ ಹಣವನ್ನೂ ತರಿಸಿಕೊಂಡಿರುವ ನದ್ದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಅವನಿಂದ ಲ್ಯಾಪ್ಟಾಪ್, ಮೊಬೈಲ್ ಫೋನ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಅವನು ವಿದೇಶದಿಂದ ಹಣ ತರಿಸಿಕೊಂಡಿರುವುದು, ತರಬೇತಿ ನೀಡಿರುವ ಪುರಾವೆಗಳು ದೊರೆತಿವೆ.ಸದ್ಯ ವಿಚಾರಣೆ ನಡೆಸಿ ಈತನನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.