ನವದೆಹಲಿ: ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು” ರಸ್ತೆ ಅಪಘಾತಗಳಿಂದ ದೇಶದಲ್ಲಿ ಈ ವರ್ಷ 1.78 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಅಸುನೀಗಿದ 1.78 ಲಕ್ಷ ಮಂದಿಯ ಪೈಕಿ ಶೇ. ಶೇ.60ರಷ್ಟು ಮಂದಿ 18ರಿಂದ 34 ವರ್ಷದೊಳಗಿನವರು. ಈ ಪೈಕಿ ಉತ್ತರಪ್ರದೇಶದಲ್ಲಿ 23,000 ಮಂದಿ ಅಸುನೀಗಿ ಮೊದಲ ಸ್ಥಾನದಲ್ಲಿದೆ. 18,000 ಮಂದಿ ಮೃತಪಟ್ಟು ತಮಿಳುನಾಡು 2ನೇ, ಮಹಾರಾಷ್ಟ್ರದಲ್ಲಿ 15,000 ಮಂದಿ ಮೃತರಾಗಿ 3ನೇ ಸ್ಥಾನದಲ್ಲಿದೆ ಎಂದರು.
ನಗರಗಳ ಪೈಕಿ ರಸ್ತೆ ಅಪಘಾತದಲ್ಲಿ 1,400 ಮಂದಿ ಮೃತಪಟ್ಟಿರುವ ನವದೆಹಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿಗೆ ಎರಡನೇ ಸ್ಥಾನ ದೊರೆತಿದ್ದು 915 ಮಂದಿ ಈ ವರ್ಷ ಸಾವಿಗೀಡಾಗಿದ್ದಾರೆ.
ದೇಶದಲ್ಲಿನ ಅಪಘಾತಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗುತ್ತದೆ. ಸರಿಯಾದ ರೀತಿಯಲ್ಲಿ ವಾಹನ ಚಾಲನೆ ಮಾಡದಿರುವುದಿಂದಲೇ ಅಪಘಾತ ಉಂಟಾಗುತ್ತದೆ. ಸಂಚಾರ ನಿಯಮಗಳ ಬಗ್ಗೆ ದೇಶದ ಯುವಕರಿಗೆ ಅರಿವು ಮೂಡಿಸಬೇಕಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.