ಜೈಪುರ: ಭಾರತದ ಪ್ರಗತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಮತ್ತು ದೇಶವನ್ನು ವಿಭಜಿಸಲು ನೋಡುತ್ತಿರುವ ಒಳಗಿನ ಮತ್ತು ಹೊರಗಿನ ಕೆಲವು ಶಕ್ತಿಗಳ ವಿರುದ್ಧ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಎಚ್ಚರಿಕೆ ನೀಡಿದ್ದಾರೆ. ಪ್ರತಿಯೊಂದು ದೇಶ-ವಿರೋಧಿ ನಿರೂಪಣೆಯನ್ನು ತಟಸ್ಥಗೊಳಿಸಲು ಜನರು ಒಟ್ಟಾಗಿರಬೇಕೆಂದು ಅವರು ಕರೆ ನೀಡಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧಂಖರ್, “ದೇಶದ ಒಳಗಿನ ಮತ್ತು ಹೊರಗಿನ ಕೆಲವು ಶಕ್ತಿಗಳಿಗೆ ಭಾರತದ ಪ್ರಗತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶವನ್ನು ಒಡೆಯಲು, ದೇಶವನ್ನು ವಿಭಜಿಸಲು ಉತ್ತಮ ಯೋಜಿತ ಪ್ರಯತ್ನ ನಡೆಯುತ್ತಿದೆ ಮತ್ತು ಭಾರತದ ಸಂಸ್ಥೆಗಳನ್ನು ಅವಮಾನಿಸಲಾಗುತ್ತಿದೆ” ಎಂದಿದ್ದಾರೆ.
“ಒಂದು ವಿಷಯ ತುಂಬಾ ಸ್ಪಷ್ಟವಾಗಿದೆ, ಭಾರತವು ಸಾಮರ್ಥ್ಯವಿರುವ ರಾಷ್ಟ್ರ. ಭಾರತವು ಏರುತ್ತಿದೆ ಮತ್ತು ನಮ್ಮ ಏಳಿಗೆಯನ್ನು ತಡೆಯಲಾಗದು” ಎಂದಿದ್ದಾರೆ.
ಮೊನ್ನೆ ಮಂಗಳವಾರ, ಇಂಡಿ ಬ್ಲಾಕ್ ಪಕ್ಷಗಳು ರಾಜ್ಯಸಭಾ ಸೆಕ್ರೆಟರಿ ಜನರಲ್ ಪಿಸಿ ಮೋದಿ ಅವರ ಕಚೇರಿಯಲ್ಲಿ ಧಂಖರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದವು, ರಾಜ್ಯಸಭಾ ಸಭಾಪತಿ ಸ್ಥಾನದಿಂದ ಧಂಖರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.