ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ 5000 ಕ್ಕೂ ಹೆಚ್ಚು ಭಗವತ್ ಭಕ್ತರು ಭಗವದ್ಗೀತೆ ಪಠಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ. ಗೀತಾ ಜಯಂತಿಯ ಪ್ರಯುಕ್ತ ಇಂದು ಆಚರಿಸಲಾದ ‘ಗೀತಾ ಪಥ’ದ ಸಂದರ್ಭದಲ್ಲಿ ಈ ವಿಶ್ವ ದಾಖಲೆಯನ್ನು ರಚಿಸಲಾಗಿದೆ.
ಭೋಪಾಲ್ನ ಲಾಲ್ ಪರೇಡ್ ಗ್ರೌಂಡ್ನ ಯೂನಿಸನ್ನಲ್ಲಿ ನಡೆದ ಗೀತಾ ಪಥದಲ್ಲಿ ಸುಮಾರು 5000 ಆಚಾರ್ಯರು ಭಗವದ್ಗೀತೆಯ ಮೂರನೇ ಅಧ್ಯಾಯ ʼಕರ್ಮ ಯೋಗʼವನ್ನು ಪಠಣ ಮಾಡಿದ್ದಾರೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.
ಭಗವದ್ಗೀತೆಯು ರಾಜ್ಯದ ಶೈಕ್ಷಣಿಕ ಪಠ್ಯಕ್ರಮದ ಭಾಗವಾಗಲಿದೆ ಎಂದು ಸೋಮವಾರ ಹರಿಯಾಣದ ಕುರುಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಗೀತಾ ಮಹೋತ್ಸವದ ಅಡಿಯಲ್ಲಿ ನಡೆದ ಸಂತ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಅಲ್ಲದೇ ಇನ್ನು ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲ ನಗರಸಭೆಗಳಲ್ಲಿ ಗೀತಾಭವನ ಸಿದ್ಧಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.