ಲಂಡನ್: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಯುಕೆಯ ಹ್ಯಾರೋ ಈಸ್ಟ್ನ ಕನ್ಸರ್ವೇಟಿವ್ ಸಂಸದ ಬಾಬ್ ಬ್ಲ್ಯಾಕ್ಮನ್ ಖಂಡಿಸಿದ್ದಾರೆ.
ಗುರುವಾರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬ್ಲ್ಯಾಕ್ಮನ್ ಅವರು, ದೇಶದಿಂದ ಇಸ್ಕಾನ್ ಅನ್ನು ನಿಷೇಧಿಸಲು ಬಾಂಗ್ಲಾದೇಶದ ಹೈಕೋರ್ಟ್ನ ಮೂಲಕ ನಡೆಸಲಾದ ಪ್ರಯತ್ನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಪೋಸ್ಟ್ನಲ್ಲಿ ಸಂಸತ್ತಿನಲ್ಲಿ ತಾನು ಮಾತನಾಡಿದ ವೀಡಿಯೊವನ್ನು ಹಂಚಿಕೊಂಡಿರುವ ಅವರು, “ಇಂದು, ನಾನು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಮತ್ತು ಚಿನ್ಮೋಯ್ ಕೃಷ್ಣ ದಾಸ್ ಅವರ ಜೈಲುವಾಸವನ್ನು ಖಂಡಿಸುತ್ತೇನೆ. ಇಸ್ಕಾನ್ ಅನ್ನು ದೇಶದಿಂದ ನಿಷೇಧಿಸಲು ಹೈಕೋರ್ಟ್ನಲ್ಲಿನ ಪ್ರಯತ್ನದ ಬಗ್ಗೆ ನಾನು ಕಳವಳ ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಈಗ ಸಾವಿಗೆ ಗುರಿಯಾಗಿದ್ದಾರೆ, ಅವರ ಆಧ್ಯಾತ್ಮಿಕ ನಾಯಕನನ್ನು ಬಂಧಿಸಲಾಗಿದೆ ಮತ್ತು ಅವರ ಮನೆಗಳನ್ನು ಸುಡಲಾಗಿದೆ. ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಸಕ್ರಿಯಗೊಳಿಸಿದ ಕಾರಣ ಈ ವಿಷಯವನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಯುಕೆ ಹೊಂದಿದೆ ಎಂದು ಅವರು ಹೇಳಿದರು.
ಬಾಂಗ್ಲಾದೇಶದೆಡೆಗೆ ವಿಶ್ವದ ಗಮನ ಹೊರಳುವಂತೆ ಮಾಡಲು ವಿದೇಶಿ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯನ್ನು ಒತ್ತಾಯಿಸಿದರು.
Today, I condemned the attacks on Hindus in Bangladesh and the imprisonment of Chinmoy Krishna Das.
I am also concerned by the attempt in their High Court to rule that #ISKCON should be banned from the country.
Freedom of religion must be preserved globally. pic.twitter.com/eYjWv5cl0Y
— Bob Blackman (@BobBlackman) November 28, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.