ಮುಂಬಯಿ: ಮಹಾರಾಷ್ಟ್ರ ತನ್ನ ನಿರ್ಣಾಯಕ ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು, ನವೆಂಬರ್ 20 ರಂದು ಮತದಾನ ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಧುಲೆ ಮತ್ತು ನಾಸಿಕ್ನಲ್ಲಿ ಪ್ರಮುಖ ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಆ ರಾಜ್ಯದ ಪ್ರಚಾರ ಕಾರ್ಯಕ್ಕೆ ಆರಂಭ ನೀಡಲಿದ್ದಾರೆ.
ನರೇಂದ್ರ ಮೋದಿಯವರ ಚುನಾವಣಾ ಸಮಾವೇಶಗಳು ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಬೆಂಬಲವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಅವರು ಈ ವಾರದಲ್ಲಿ ಒಟ್ಟು 9 ಸಮಾವೇಶಗಳನ್ನು ನಡೆಸುವ ನಿರೀಕ್ಷೆ ಇದೆ.
ಗುರುವಾರ ಎಕ್ಸ್ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಅವರು, “ಮಹಾರಾಷ್ಟ್ರದಲ್ಲಿ ನನ್ನ ಕುಟುಂಬ ಸದಸ್ಯರು ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲುವು ಸಾಧಿಸಲು ನಿರ್ಧರಿಸಿದ್ದಾರೆ. ಈ ಉತ್ಸಾಹದ ವಾತಾವರಣದಲ್ಲಿ, ನಾನು ನಾಳೆ ಮಧ್ಯಾಹ್ನ 12 ಗಂಟೆಗೆ ಧುಲೆಯಲ್ಲಿ ಮತ್ತು ನಂತರ 2 ಗಂಟೆಗೆ ನಾಸಿಕ್ನಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಮೂಲಕ ಜನರ ಆಶೀರ್ವಾದವನ್ನು ಪಡೆಯುತ್ತೇನೆ” ಎಂದಿದ್ದಾರೆ.
ನವೆಂಬರ್ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
https://x.com/narendramodi/status/1854554193022857632?ref_src=twsrc%5Etfw%7Ctwcamp%5Etweetembed%7Ctwterm%5E1854554193022857632%7Ctwgr%5E5d0891a2559f999c0b6c4d082f63503cd9226aa3%7Ctwcon%5Es1_&ref_url=https%3A%2F%2Fwww.livemint.com%2Felections%2Fmaharashtra-elections-pm-modi-to-address-dhule-nashik-meetings-today-bjp-ramps-up-campaign-with-9-rallies-in-1-week-11731032236793.html
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.