ಬೆಂಗಳೂರು: ಕಾಂತರಾಜು ವರದಿ, ಸದಾಶಿವ ಆಯೋಗದ ವರದಿಯ ಮಾಹಿತಿ ಆಧಾರದಲ್ಲಿ ಒಳ ಮೀಸಲಾತಿ ಕೊಡಿ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜು ವರದಿಯಂತೆ ಜಾತಿ ಗಣತಿ ನಿಮ್ಮಲ್ಲೇ ಇದೆ. ನಮ್ಮ ಕಣ್ಣೊರೆಸಲು, ಈ ಸಮಾಜ ಧಿಕ್ಕರಿಸಲು, ದಿಕ್ಕು ತಪ್ಪಿಸಲು, ಒಳ ಮೀಸಲಾತಿಯ ಮೋಸ ಮಾಡಲು ಯಾವುದೇ ಕಾರಣಕ್ಕೂ ಹೊಸ ಆಯೋಗದ ಅವಶ್ಯಕತೆ ಇಲ್ಲ. ಆಯೋಗ ರಚಿಸಲು ಸರಕಾರದ ಆದೇಶ ಕೊಡಬೇಕಿಲ್ಲ ಎಂದು ಒತ್ತಾಯಿಸಿದರು. ಹರಿಯಾಣದಲ್ಲಿ ಬಿಜೆಪಿ ಸರಕಾರ ಮಾತುಕೊಟ್ಟಂತೆ ಸರಕಾರ ನಡೆದುಕೊಂಡಿದೆ ಎಂದು ಗಮನ ಸೆಳೆದರು.
ಮತ್ತೊಮ್ಮೆ ಅಂಕಿಅಂಶ ಪಡೆಯಲು 8 ವರ್ಷ ಆಗಲಿದೆ. ಆ ಪದವನ್ನು ನಮ್ಮ ಮೇಲೆ ಹೇರಿ ಅದನ್ನು ತೋರಿಸಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದು, ಒಳಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ಸಿಗೆ ಇಚ್ಛಾಶಕ್ತಿ ಇಲ್ಲವೆಂಬ ಮಾನಸಿಕತೆ ನಮಗೆ ಬಂದಿದೆ ಎಂದು ತಿಳಿಸಿದರು. ನೀವು ತಮಿಳುನಾಡಿನ ಜನಾರ್ದನ್ ಕಮಿಷನ್ ವರದಿ, ಆಂಧ್ರದ ರಾಮಚಂದ್ರ ಆಯೋಗದ ವರದಿ, ಮಹಾರಾಷ್ಟ್ರದ ವರದಿ ತೆಗೆದರೆ ಯಾವ ಸಮಾಜ ಚಮ್ಮಾರಿಕೆ ವೃತ್ತಿಯ ಮಾದಿಗ ಸಮುದಾಯದ ಉಪ ಜಾತಿಗಳೆಲ್ಲ ಇವೆಯೋ ಅವುಗಳು ಎಲ್ಲ ರಂಗಗಳಲ್ಲಿ ಹಿಂದುಳಿದಿವೆ ಎಂದರು.
ರೇವಂತ್ ರೆಡ್ಡಿಯವರು ಒಳ ಮೀಸಲಾತಿ ಜಾರಿ ಬಗ್ಗೆ ಪ್ರಕಟಿಸಿದ ತಕ್ಷಣ ದೆಹಲಿಯಿಂದ ಫೋನ್ ಬಂತು. ರೇವಂತ್ ರೆಡ್ಡಿಯವರು ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿದ್ದು, ಮಾಡಬಾರದೆಂದು ಕಾಂಗ್ರೆಸ್ಸಿನ ದೆಹಲಿ ಹೈಕಮಾಂಡ್ ಫೋನ್ ಬಂದಿದೆ. ಒಳ ಮೀಸಲಾತಿ ವಿಷಯದಲ್ಲಿ ದಕ್ಷಿಣ ಭಾರತದ ಎಲ್ಲ ಕಾಂಗ್ರೆಸ್ ಸರಕಾರಗಳ ಮುಖ್ಯಮಂತ್ರಿಗಳಿಗೆ ಆದೇಶ ಆಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಸಭೆ ಮಾಡಿ ಸೂಚನೆ ಕೊಟ್ಟಿದ್ದಾರೆ; ಇದು ಸಾರ್ವಜನಿಕವಾಗಿ ಚರ್ಚೆ ಆಗಲಿ ಎಂದು ಸವಾಲು ಹಾಕಿದರು.
ನಾವು ಜಾತಿ ಆಧಾರದಲ್ಲಿ ಮೀಸಲಾತಿ ಕೇಳುತ್ತಿಲ್ಲ. ಮಾದಿಗ ಉಪ ಜಾತಿಗಳು ನಿಮ್ಮ ಪಂಚವಾರ್ಷಿಕ ಯೋಜನೆಗಳ ಮಧ್ಯದಲ್ಲಿ 75 ವರ್ಷಗಳ ಬಜೆಟ್ ನಂತರವೂ ಸಹ ಮೀಸಲಾತಿ ತಲುಪಲಾಗುತ್ತಿಲ್ಲ. ಒಂದು ಆಯೋಗ ರಚಿಸಿ 18 ವರ್ಷ ತೆಗೆದುಕೊಂಡರು. ಆಯೋಗದ ಮೇಲೆ ಮತ್ತೊಂದು ಆಯೋಗ ರಚಿಸಿದರೆ ಎಷ್ಟು ದಶಕ ಕಾಯಬೇಕಾದೀತು ಎಂದು ನಮ್ಮ ಪ್ರಶ್ನೆ ಇದೆ ಎಂದು ಕೇಳಿದರು.
ಮೊನ್ನೆ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆ ಪ್ರಕಟಿಸಿದ್ದಾರೆ. ಅಸ್ಪøಶ್ಯರು ಶೇ 8 ರಷ್ಟಿಲ್ಲ. 81ರ ಪಟ್ಟಿಯಲ್ಲಿ 9 ಜನ ಅಸ್ಪøಶ್ಯರಿಲ್ಲ. ಅಸಿಸ್ಟೆಂಟ್ ಕಮೀಷನರ್ ಹುದ್ದೆಗಳನ್ನು ನೋಡಿದರೆ, ಶೇ 1ರಷ್ಟು ಫಲಿತಾಂಶ ಇಲ್ಲ. 1976ರ ನಂತರ ಮೀಸಲಾತಿಯಲ್ಲಿ 101 ಜಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣತಾ ಅಂಕಿಅಂಶ ನೋಡಿದರೆ, ಬಹುತೇಕ ಅಸ್ಪøಶ್ಯರು ಸರಕಾರಿ ಹುದ್ದೆ ಪಡೆಯಲಾಗುತ್ತಿಲ್ಲ ಎಂದು ವಿವರಿಸಿದರು.
ಸನ್ಮಾನ್ಯ ಮುಖ್ಯಮಂತ್ರಿಗಳೇ, ಉಪ ಮುಖ್ಯಮಂತ್ರಿಗಳೇ ತಮ್ಮ ವ್ಯಾಖ್ಯಾನವನ್ನು ಬದಿಗೊತ್ತಿ. ನಮ್ಮ ಮಾಧುಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಆಗಿತ್ತು. ಅದರಲ್ಲಿ ಕೇವಲ ಸದಾಶಿವ ಆಯೋಗದ ವರದಿ ನೋಡಿ ವರದಿ ಕೊಟ್ಟಿಲ್ಲ; ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚು ಮಾಡಿದ್ದಾಗಿ ವಿವರ ನೀಡಿದರು. 2026ರ ಜನಗಣತಿ ವರೆಗೆ ಕಾಯಿಸುವ ಅಥವಾ ನಮ್ಮನ್ನು ದಿಕ್ಕು ತಪ್ಪಿಸುವ ಆತಂಕ ನಮಗಿದೆ. ಮಾಧುಸ್ವಾಮಿ ವರದಿಯಲ್ಲಿ ಈ ವ್ಯತ್ಯಾಸ ಸರಿಮಾಡಿದ್ದಾರೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಿದ್ದಾರೆ ಎಂದರು.
ಎಲ್ಲ ರಂಗಗಳಲ್ಲಿ ಹಿಂದುಳಿದ ಸಮಾಜಕ್ಕೆ ಮೋಸ ಮಾಡಿದಿರಿ ಎಂದು ಮನವಿ ಮಾಡಿದರು. ಹಿಂದುಳಿದ ಸಮಾಜವನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ. ಡಾ. ಅಂಬೇಡ್ಕರ್ ಅವರು ಇದನ್ನೇ ಹೇಳಿದ್ದಾರೆ. ಸಮಾನತೆಗೆ ಸಂಬಂಧಿಸಿದ ಸಂವಿಧಾನದ ನಿರ್ದೇಶನವನ್ನು ಪಾಲಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಪ್ರಾರ್ಥಿಸಿದರು.
ಜನಸಂಖ್ಯೆ ಆಧಾರದಲ್ಲಿ ಸಮರ್ಪಕವಾಗಿ ಮೀಸಲಾತಿ ಕೊಟ್ಟಿಲ್ಲ. ಸದಾಶಿವ ಆಯೋಗದ ವರದಿಯಡಿ ಭೋವಿ, ಬಂಜಾರ ಸಮಾಜವನ್ನು ಮೀಸಲಾತಿಯಿಂದ ತೆಗೆಯುತ್ತಾರೆಂದು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿದ್ದರು. ಸದಾಶಿವ ವರದಿ ಸಾರ್ವಜನಿಕ ನೆಲೆಯಲ್ಲಿ ಲಭ್ಯವಿದೆ. ನ್ಯಾ. ಸದಾಶಿವ ಅವರು ಕೇವಲ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಟ್ಟಿಲ್ಲ. ಭೋವಿ, ಲಂಬಾಣಿ ಸಮಾಜವನ್ನು ಮೀಸಲಾತಿಯಿಂದ ತೆಗೆಯುವಂತೆ ನ್ಯಾ. ಸದಾಶಿವ ಆಯೋಗ ವರದಿ ಕೊಟ್ಟಿಲ್ಲ. ಸುಪ್ರೀಂ ಕೋರ್ಟಿಗೆ ಭೋವಿ, ಲಂಬಾಣಿ ಸಮಾಜವನ್ನು ಎಸ್ಸಿ ಪಟ್ಟಿಯಿಂದ ತೆಗೆಯಲು ಅರ್ಜಿ ಹಾಕಿದ್ದರೋ ಅದರ ಭಾಗವಾಗಿ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಕೊಟ್ಟಿತ್ತು. ಆಗ ಕೇಂದ್ರವು ಎಸ್ಸಿ, ಎಸ್ಟಿ ಕಮಿಷನ್ಗೆ ಇದರ ಬಗ್ಗೆ ರಾಜ್ಯ ಸರಕಾರದ ಅಭಿಪ್ರಾಯ ಪಡೆಯಲು ತಿಳಿಸಿತ್ತು. 9 ವರ್ಷಗಳ ಕಾಲ ಕಾಂಗ್ರೆಸ್ ಆ ಪತ್ರವನ್ನೇ ನೋಡಿರಲಿಲ್ಲ ಎಂದು ದೂರಿದರು.
ಆ ಪತ್ರಕ್ಕೆ ಸಮರ್ಪಕ ಉತ್ತರವನ್ನು ಬಿಜೆಪಿಯ ಬೊಮ್ಮಾಯಿ ಸರಕಾರವು ಸ್ಪಷ್ಟನೆ ನೀಡಿದ್ದು, ನಾವು ಭೋವಿ, ಲಂಬಾಣಿ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯುವುದಿಲ್ಲ. ಅವರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲೇ ಉಳಿಸಿಕೊಳ್ಳುವುದಾಗಿ ಸ್ಪಷ್ಟ ತೀರ್ಮಾನವನ್ನು ಎಸ್ಸಿ, ಎಸ್ಟಿ ಕಮಿಷನ್ಗೆ ಉತ್ತರಿಸಿದ್ದರು ಎಂದು ವಿವರ ನೀಡಿದರು.
ಒಳಮೀಸಲಾತಿ ವಿಷಯ ರಾಜ್ಯ ಸಚಿವ ಸಂಪುಟದ ಸಭೆ ಮುಂದಿದೆ ಎಂಬುದು ರಾತ್ರಿ 8.50ರವರೆಗೂ ಮಂತ್ರಿಮಂಡಲದ ಸದಸ್ಯರಿಗೆ ಗೊತ್ತಿರಲಿಲ್ಲ. ಕ್ಯಾಬಿನೆಟ್ ಸಭೆ ಪ್ರಾರಂಭವಾದ ಒಂದೂಕಾಲು ಗಂಟೆಯ ನಂತರ ಹೆಚ್ಚುವರಿ ವಿಷಯ ಇದೆ ಎಂದು ಸಂದೇಶ ಬಂದಿತ್ತು. ವಿಷಯ ಚರ್ಚೆ ಆಗುವಾಗ ಅಲ್ಲೇ ಮತ್ತೊಬ್ಬ ಕ್ಯಾಬಿನೆಟ್ ಸದಸ್ಯರು ದಶಾಂಶ ಸರಿಯಿಲ್ಲ; ಇದನ್ನು ನಾವು ಪರಿಹರಿಸಲು ಸಾಧ್ಯವಾಗದು; ಕ್ಯಾಬಿನೆಟ್ ಉಪ ಸಮಿತಿ ಬೇಡ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಬೇಕೆಂದು ತಿಳಿಸಿದ್ದರು ಎಂದರು.
ಕೇವಲ ಜಾತಿ ಆಧಾರದಲ್ಲಿ ಒಳ ಮೀಸಲಾತಿಯನ್ನು ನಾವೆಲ್ಲೂ ಕೇಳಿಲ್ಲ; ಹೈದರಾಬಾದ್ ಕರ್ನಾಟಕವು ಹಿಂದುಳಿದ ಕಾರಣಕ್ಕೆ ಆರ್ಟಿಕಲ್ 371 ಜೆಯನ್ನು ಪ್ರಕಟಿಸಿದ್ದರು. ಈ ಭಾಗದಲ್ಲಿ ಇರತಕ್ಕ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳ ಪಟ್ಟಿಯಲ್ಲಿ 51 ಎಡಗೈ ಸಮುದಾಯದ ಬಂಧುಗಳು, 100ಕ್ಕೆ 80 ಜನಸಂಖ್ಯೆ ಹೆಚ್ಚಾಗಿರುವುದು ನಿಜಾಮರ ಆಡಳಿತವಿದ್ದ ಹೈಕ ಭಾಗದಲ್ಲಿ ಎಂದು ವಿವರ ನೀಡಿದರು. ಆ ಭಾಗದ ಮಾದಿಗರು ಎಲ್ಲ ರಂಗಗÀಳಲ್ಲಿ ದಕ್ಷಿಣ ಕರ್ನಾಟಕದ ಯಾವುದೇ ಸಮಾಜದ ಬಂಧುಗಳ ಜೊತೆ ಸ್ಪರ್ಧಿಸಲು ಆಗುವುದಿಲ್ಲ. ಆರ್ಟಿಕಲ್ 371 ಜೆ ವಿಶೇóಷ ಸ್ಥಾನಮಾನ ಕೊಟ್ಟರೆ ಅಲ್ಲಿನ ಈ ದಲಿತ ಸಮುದಾಯಕ್ಕೆ ಹಿಂದುಳಿದಿರುವಿಕೆ ಆಧಾರದಲ್ಲಿ ಒಳ ಮೀಸಲಾತಿ ಯಾಕೆ ಹೆಚ್ಚು ಕೊಡಬಾರದು ಎಂದು ಪ್ರಶ್ನಿಸಿದರು.
ಜಾತಿ ಆಧಾರದಲ್ಲಿ ಮೀಸಲಾತಿ ಕೇಳಿದ್ದಲ್ಲ. ಈ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿ ಅನೇಕ ಆಯೋಗಗಳನ್ನು ರಚಿಸಲಾಗಿದೆ. ಸದಾಶಿವ ಆಯೋಗದ ವರದಿಯೂ ನನ್ನ ಕಣ್ಮುಂದೆ ಇದೆ. ಅವರು ಪ್ರತಿ ಜಿಲ್ಲೆ, ಜಿಲ್ಲಾಡಳಿತದ ಜೊತೆ ಚರ್ಚಿಸಿದ್ದಾರೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಮಾಹಿತಿಯೊಂದಿಗೆ ಆ ಸಭೆಗೆ ಬಂದಿದ್ದರು ಎಂದರು.
101 ಜಾತಿಯಲ್ಲಿ ಶೈಕ್ಷಣಿಕವಾಗಿ ಆ ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಶೇಕಡಾ ಜನರು ಪ್ರಾಥಮಿಕ ಶಾಲೆಗೆ ಸೇರುತ್ತಾರೆ, ಪಿಜಿ ಕೋರ್ಸಿಗೆ ಹೋಗುವಾಗ ಎಷ್ಟು ಶೇಕಡಾ ಹೊರಗುಳಿಯುತ್ತಾರೆ ಎಂಬುದು ಅಥವಾ ಶೇಕಡಾವಾರು ಹೊರಗುಳಿಯುವವರ ಅಂಕಿಸಂಖ್ಯೆ ಒಂದೊಂದು ವರ್ಗಕ್ಕೂ ವ್ಯತ್ಯಾಸವಿದೆ. ಶೈಕ್ಷಣಿಕವಾಗಿ ಅತಿ ಹೆಚ್ಚು ಹೊರಗುಳಿಯುವವರಿಗೆ ವಿಶೇóಷ ಮೀಸಲಾತಿ ಕೊಡಬೇಕೆಂದು ಜಸ್ಟಿಸ್ ಸದಾಶಿವರ ಉದ್ದೇಶವಿತ್ತು ಎಂದರು.
ಕೇವಲ ಶಿಕ್ಷಣದಲ್ಲೇ ಅಲ್ಲ; ಒಂದು ವರ್ಗ ಆರ್ಥಿಕವಾಗಿ ಎಷ್ಟು ಶೇಕಡಾ ಜನರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ; ಆರ್ಸಿಸಿ ಮನೆಗಳಲ್ಲಿ ವಾಸ ಇದ್ದಾರೆ? ನಿವೇಶನವೇ ಇಲ್ಲದೇ ಇರತಕ್ಕ ಹೆಚ್ಚು ಜನಸಂಖ್ಯೆ ಯಾವುದು? ಅಸ್ಪøಶ್ಯರಲ್ಲಿ ಜನರ ಮಧ್ಯೆ ಬರಲು, ಜೀವನ ಸಾಗಿಸಲು ನಿವೇಶನ, ಮನೆ, ವಿದ್ಯುತ್, ಗ್ಯಾಸ್, ಶಿಕ್ಷಣ, ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಯೋಗ್ಯತೆ ಇಲ್ಲದ ಹೆಚ್ಚು ಶೇಕಡಾವಾರು ಇರುವ ಜನಾಂಗ ಯಾವುದು? ಇವೆಲ್ಲ ಅಂಕಿಅಂಶ ಸದಾಶಿವ ಆಯೋಗದಲ್ಲಿದೆ ಎಂದು ವಿಶ್ಲೇಷಿಸಿದರು.
ರಾಜ್ಯದಲ್ಲಿ 30 ವರ್ಷಗಳಿಂದ ಅನೇಕ ಸಂಘಟನೆಗಳು ಒಳ ಮೀಸಲಾತಿಗಾಗಿ ಹೋರಾಟವನ್ನು ಮಾಡುತ್ತಿವೆ. ವಿಶೇóಷವಾಗಿ ಹೈದರಾಬಾದ್ ಕರ್ನಾಟಕದ ಮಾದಿಗ ಬಂಧುಗಳು ಹೆಚ್ಚು ಹೋರಾಟಗಳನ್ನು ಮಾಡಿದ್ದರು. ಈ ಹೋರಾಟಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲೂ ನಡೆದಿದ್ದವು. ಈ ಹಿಂದೆ 1975ರಲ್ಲಿ ಪಂಜಾಬ್ನಲ್ಲಿ ಮಜಬಿ ಸಿಕ್ಖರಿಗೆ ಮತ್ತು ವಾಲ್ಮೀಕಿಗಳಿಗೆ ನೀಡಿದ್ದ ಒಳಮೀಸಲಾತಿ 29 ವರ್ಷಗಳ ಕಾಲ ಜಾರಿಯಲ್ಲಿತ್ತು. ಹರಿಯಾಣದಲ್ಲಿ 1992ರಲ್ಲಿ ಒಳಮೀಸಲಾತಿ ಘೋಷಿಸಿದ್ದು, 9 ವರ್ಷಗಳ ಕಾಲ ಅದು ಜಾರಿಯಲ್ಲಿತ್ತು. 1999- 2000ದ ಕಾಲಘಟ್ಟದಲ್ಲಿ ಆಂಧ್ರ ಪ್ರದೇಶದಲ್ಲಿ ನೀಡಿದ್ದ ಒಳ ಮೀಸಲಾತಿಯನ್ನು ಅಲ್ಲಿನ ಹೈಕೋರ್ಟ್ ಎತ್ತಿ ಹಿಡಿದಾಗ ಅದರ ವಿರುದ್ಧ ಇ.ವಿ.ಚೆನ್ನಯ್ಯ ಕೇಸಿನಲ್ಲಿ ಸಂತೋಷ್ ಹೆಗ್ಡೆಯವರು ನೀಡಿದ್ದ 5 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ತೀರ್ಮಾನದಿಂದ 29 ವರ್ಷ ಮೀಸಲಾತಿ ಪಡೆದಿದ್ದ ಶೋಷಿತ ವರ್ಗ ಪಂಜಾಬಿನಲ್ಲಿ ವಂಚನೆಗೆ ಒಳಗಾಗಿತ್ತು. ಹರಿಯಾಣದಲ್ಲಿ 9 ವರ್ಷಗಳು ಎಲ್ಲ ರಂಗಗಳಲ್ಲಿ ಒಳ ಮೀಸಲಾತಿ ಪಡೆದಿದ್ದ ಅಲ್ಲಿನ ಮಜಬಿ ಸಿಕ್ಖ್, ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಆಯಿತು. 2000ದಲ್ಲಿ ಮೀಸಲಾತಿ ಕೊಟ್ಟ ಆಂಧ್ರ ಪ್ರದೇಶದಲ್ಲಿ ಮೀಸಲಾತಿ ಅನುಭವಿಸಿದ್ದ ಅಲ್ಲಿನ ಮಾದಿಗ ಸಮುದಾಯ, ಮೀಸಲಾತಿಯಿಂದ ವಂಚಿತವಾದರು ಎಂದು ವಿವರಿಸಿದರು.
ಅರುಣ್ ಮಿಶ್ರ ಅವರ ವರದಿಯ ನಂತರ ಯಾವ ಕಾಂಗ್ರೆಸ್ ಸರಕಾರವು ಉಷಾ ಮೆಹ್ರಾ ವರದಿಯನ್ನು ತಿರಸ್ಕರಿಸಿದ ಸಮಯದಲ್ಲಿ ಕರ್ನಾಟಕದಲ್ಲಿ, ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇತ್ತು. ಇಡೀ ದೇಶದ ಅನೇಕ ಅಂಕಿಅಂಶಗಳನ್ನು ಪಡೆದು ಉಷಾ ಮೆಹ್ರಾ ಅವರು ಈ ದೇಶದಲ್ಲಿ ನೂರಾರು ಸಮುದಾಯಗಳು ಮೀಸಲಾತಿಯ ಹತ್ತಿರಕ್ಕೆ ಬರಲಾಗಲಿಲ್ಲ ಎಂದು ವಿವರಿದ್ದಾಗಿ ಹೇಳಿದರು.
ಕರ್ನಾಟಕದಲ್ಲಿ 2005ರಲ್ಲಿ ಸದಾಶಿವ ಆಯೋಗ ರಚಿಸಿದ್ದು, ವರದಿ ಕೊಡಲು 8 ವರ್ಷಗಳ ಕಾಲ ತೆಗೆದುಕೊಳ್ಳಲಾಗಿತ್ತು. ಆಗಸ್ಟ್ 1ರಂದು ಸುಪ್ರೀಂ ಕೋರ್ಟಿನ ತೀರ್ಪು ಬಂದಾಗ ಈ ದೇಶದ ಯಾವುದೇ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಸುಪ್ರೀಂಕೋರ್ಟ್, ಕೇಂದ್ರ ಸರಕಾರದ ಅನುಮತಿ ಅವಶ್ಯಕತೆ ಇಲ್ಲ. ಆಯಾ ರಾಜ್ಯಗಳಿಗೆ ಅಧಿಕಾರ ಇದೆ. ದಶಾಂಶಗಳ ಮುಖಾಂತರ ಮತ್ತು ಶೈಕ್ಷಣಿಕ- ಆರ್ಥಿಕ- ಸಾಮಾಜಿಕವಾಗಿ ಹಿಂದುಳಿದ ಆಧಾರದ ಮೇಲೆ ಪರಿಶಿಷ್ಟ ಜಾತಿಗಳಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಮೀಸಲಾತಿ ಕೊಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆ ಎಂದಿದೆ. ಆರ್ಟಿಕಲ್ 14, 15, 16ರ ಪ್ರಕಾರ ಈ ದೇಶದ ಪ್ರತಿಯೊಂದು ವರ್ಗಕ್ಕೆ ಶೈಕ್ಷಣಿಕ- ಆರ್ಥಿಕ- ಸಾಮಾಜಿಕವಾಗಿ ಸಮಾನತೆಯನ್ನು ಕೊಡಲು ವಿಶೇಷ ಅವಕಾಶ ಕೊಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದರು.
ಬಿಜೆಪಿ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಎಂ. ಶಂಕರಪ್ಪ, ಪಕ್ಷದ ಮುಖಂಡರಾದ ಬಿ.ಹೆಚ್. ಅನಿಲ್ ಕುಮಾರ್, ಲಕ್ಷ್ಮೀನಾರಾಯಣ್, ರಾಜ್ಯ ಮಾಧ್ಯಮ ವಕ್ತಾರ ವೆಂಕಟೇಶ ದೊಡ್ಡೇರಿ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.