ನವದೆಹಲಿ: 2030 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯತ್ತ ಭಾರತೀಯ ರೈಲ್ವೇ ದಾಪುಗಾಲಿಡುತ್ತಿದೆ. ರೈಲ್ವೆ ಮಂಡಳಿಯ ಪ್ರಕಾರ, ರೈಲ್ವೆಯ ಇಂಧನ ಅಗತ್ಯಗಳನ್ನು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ಪೂರೈಸುವತ್ತ ಗಮನಹರಿಸಲಾಗುತ್ತಿದೆ. ಇದಕ್ಕಾಗಿ ದೇಶಾದ್ಯಂತ ರೈಲ್ವೆ ನಿಲ್ದಾಣಗಳನ್ನು ಸೌರಶಕ್ತಿಗೆ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದೆ.
“ಭಾರತೀಯ ರೈಲ್ವೇಯು #NetZeroCarbonEmission ಭವಿಷ್ಯದತ್ತ ಮುನ್ನಡೆಯುತ್ತಿದೆ, 2,000 ರೈಲ್ವೇ ನಿಲ್ದಾಣಗಳು ಸೌರ ಶಕ್ತಿಯನ್ನು ಬಳಸಿಕೊಳ್ಳುತ್ತಿವೆ” ಎಂದು ರೈಲ್ವೇ ಸಚಿವಾಲಯ ಎಕ್ಸ್ ಪೋಸ್ಟ್ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಲ್ಹಾದ್ ಜೋಶಿ ಅವರು, ” ರಾಷ್ಟ್ರದಾದ್ಯಂತ 2000 ರೈಲ್ವೇ ನಿಲ್ದಾಣಗಳಿಗೆ ಶಕ್ತಿ ನೀಡಲು ಸೌರಶಕ್ತಿಯನ್ನು ಬಳಸಿಕೊಳ್ಳುವುದಕ್ಕಾಗಿ ರೈಲ್ವೇ ಸಚಿವಾಲಯಕ್ಕೆ ಅಭಿನಂದನೆಗಳು.! ಸುಸ್ಥಿರ ಮತ್ತು ಪರಿಸರ ಸ್ನೇಹಿ ರೈಲ್ವೆಯತ್ತ ಒಂದು ಗಮನಾರ್ಹ ಹೆಜ್ಜೆ, ಸ್ವಚ್ಛ ಮತ್ತು ಹಸಿರು ಭಾರತಕ್ಕೆ ದಾರಿ ಮಾಡಿಕೊಡುತ್ತದೆ” ಎಂದಿದ್ದಾರೆ.
Kudos to @RailMinIndia for harnessing solar energy to power 2000 railway stations across the nation! A remarkable step towards sustainable and eco-friendly railways, paving the way for a cleaner and greener India.🌞🇮🇳@AshwiniVaishnaw https://t.co/k08Km164eK
— Pralhad Joshi (@JoshiPralhad) October 26, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.