ನವದೆಹಲಿ: ಕೇಂದ್ರ ಸರ್ಕಾರವು ಉಕ್ಕಿನ ಮನುಷ್ಯ ಮತ್ತು ಭಾರತದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮದಿನಾಚರಣೆಯನ್ನು 2024 ರಿಂದ 2026 ರವರೆಗೆ ಎರಡು ವರ್ಷಗಳ ರಾಷ್ಟ್ರವ್ಯಾಪಿ ಕಾರ್ಯಕ್ರಮದೊಂದಿಗೆ ಆಚರಿಸುವ ನಿರ್ಧಾರ ಕೈಗೊಂಡಿದೆ. ದೇಶಕ್ಕೆ ಅವರ ಸ್ಮರಣೀಯ ಕೊಡುಗೆಯನ್ನು ಗೌರವಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಘೋಷಿಸಿದ್ದಾರೆ.
ವಿಶ್ವದ ಅತ್ಯಂತ ದೃಢವಾದ ಪ್ರಜಾಪ್ರಭುತ್ವಗಳ ಸ್ಥಾಪನೆಯ ಹಿಂದಿನ ದಾರ್ಶನಿಕರಾಗಿ ಸರ್ದಾರ್ ಪಟೇಲ್ ಅವರ ನಿರಂತರ ಪರಂಪರೆ ಮತ್ತು ಕಾಶ್ಮೀರದಿಂದ ಲಕ್ಷದ್ವೀಪದವರೆಗೆ ಭಾರತವನ್ನು ಏಕೀಕರಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಅಳಿಸಲಾಗದು ಎಂದು ಶಾ ಹೇಳಿದ್ದಾರೆ.
“ಪಟೇಲ್ ಅವರ ಸ್ಮರಣೀಯ ಕೊಡುಗೆಗಳನ್ನು ಗೌರವಿಸಲು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಅವರ 150 ನೇ ಜನ್ಮ ವಾರ್ಷಿಕೋತ್ಸವವನ್ನು 2024 ರಿಂದ 2026 ರವರೆಗೆ ಎರಡು ವರ್ಷಗಳ ರಾಷ್ಟ್ರವ್ಯಾಪಿ ಆಚರಣೆಯೊಂದಿಗೆ ಸ್ಮರಿಸುತ್ತದೆ” ಎಂದು ಅವರು X ಪೋಸ್ಟ್ ಮಾಡಿದ್ದಾರೆ.
ಈ ಆಚರಣೆಯು ಅವರ ಗಮನಾರ್ಹ ಸಾಧನೆಗಳು ಮತ್ತು ಅವರು ಬಿಂಬಿಸಿದ ಏಕತೆಯ ಮನೋಭಾವಕ್ಕೆ ಸಾಕ್ಷಿಯಾಗಲಿದೆ ಎಂದು ಗೃಹ ಸಚಿವರು ಪ್ರತಿಪಾದಿಸಿದ್ದಾರೆ.
Sardar Patel Ji’s enduring legacy as the visionary behind the establishment of one of the world’s most robust democracies and his pivotal role in unifying India from Kashmir to Lakshadweep remains indelible. To honor his monumental contributions, the government of India, under…
— Amit Shah (@AmitShah) October 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.