ಶಿಮ್ಲಾ: ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಸುಮ್ಡೋದಲ್ಲಿ ಭಾರತೀಯ ಸೇನೆ ಆಯೋಜಿಸಿದ್ದ ಮೊಟ್ಟಮೊದಲ ಎತ್ತರದ ಮ್ಯಾರಥಾನ್ನಲ್ಲಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಸೇನೆಯ ಆಪರೇಷನ್ ಸದ್ಭಾವನಾ ಅಂಗವಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಸ್ಪಿತಿ ಮ್ಯಾರಥಾನ್ನಲ್ಲಿ ಸ್ಥಳೀಯರು ಸೇರಿದಂತೆ 640 ಮಂದಿ ಭಾಗವಹಿಸಿದ್ದರು.
77 ಕಿಮೀ ಸ್ಪಿತಿ ಅವೆಂಜರ್ಸ್ (ಪುರುಷರ) ಸ್ಪರ್ಧೆಯಲ್ಲಿ ಲಡಾಖ್ ಪೊಲೀಸ್ನ ಜಿಗ್ಮೆಟ್ ನಮ್ಗ್ಯಾಲ್ ಗೆದ್ದರೆ, ಮಹಿಳಾ ವಿಭಾಗದಲ್ಲಿ ಟೆಂಜಿನ್ ಡೊಲ್ಮಾ ಮೊದಲ ಸ್ಥಾನ ಪಡೆದರು. 42 ಕಿಮೀ ಪೂರ್ಣ ಮ್ಯಾರಥಾನ್ ಪ್ರಶಸ್ತಿಯನ್ನು ಭಾರತೀಯ ಸೇನಾ ಸಿಬ್ಬಂದಿ ನಾಯಕ್ ಹೆಟ್ ರಾಮ್ ಪಡೆದರು ಮತ್ತು ಮಹಿಳೆಯರ ಪೂರ್ಣ ಮ್ಯಾರಥಾನ್ ಅನ್ನು ಡಿಸ್ಕೆಟ್ ಡೊಲ್ಮಾ ಗೆದ್ದರು.
ಪುರುಷರ ಹಾಫ್ ಮ್ಯಾರಥಾನ್ನಲ್ಲಿ ಭಾರತೀಯ ಸೇನೆಯ ಟೆಸ್ಟನ್ ನಮ್ಗ್ಯಾಲ್ ಪ್ರಥಮ ಸ್ಥಾನ ಗಳಿಸಿದರೆ, ತಾಶಿ ಲಾಡೋಲ್ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಪಡೆದರು.
#IndianArmy #CentralCommand #HimachalTourism #IndiaRunning #RunningCommunity #MarathonRunners #SpitiMarathon #FinisherMedal
🏅"𝙋𝙧𝙤𝙪𝙙 𝙈𝙤𝙢𝙚𝙣𝙩 𝙞𝙣 𝙩𝙝𝙚
𝙃𝙞𝙢𝙖𝙡𝙖𝙮𝙖𝙨" 🏅The first 𝗦𝗽𝗶𝘁𝗶 𝗛𝗶𝗴𝗵 𝗔𝗹𝘁𝗶𝘁𝘂𝗱𝗲 𝗠𝗮𝗿𝗮𝘁𝗵𝗼𝗻,… pic.twitter.com/WeXGHvH14u
— SuryaCommand_IA (@suryacommand) September 29, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.