ನವದೆಹಲಿ: ಚಂದ್ರನ ಬಂಡೆಗಳು ಮತ್ತು ಮಣ್ಣನ್ನು ಭೂಮಿಗೆ ತರುವ ಚಂದ್ರಯಾನ-4 ಮಿಷನ್ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಚಂದ್ರನ ಮೇಲ್ಮೈಯಲ್ಲಿ ಇಳಿಯುವುದು, ಚಂದ್ರನ ಮಾದರಿ ಸಂಗ್ರಹಣೆ, ಚಂದ್ರನ ಕಕ್ಷೆಯಲ್ಲಿ ಡಾಕಿಂಗ್ ಮತ್ತು ಅನ್ಡಾಕಿಂಗ್ ಸೇರಿದಂತೆ ಹೆಚ್ಚಿನ ಅಂಶಗಳನ್ನು ಚಂದ್ರಯಾನ-4 ಮಿಷನ್ ಅಲ್ಲಿ ಸೇರಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸರ್ಕಾರವು ವೀನಸ್ ಆರ್ಬಿಟರ್ ಮಿಷನ್, ಗಗನಯಾನ ಫಾಲೋ-ಆನ್ ಮತ್ತು ಭಾರತೀಯ ಬಾಹ್ಯಾಕಾಶ ನಿಲ್ದಾಣ (ಬಿಎಎಸ್), ಮೊದಲ ಮತ್ತು ಮುಂದಿನ ತಲೆಮಾರಿನ ಉಡಾವಣಾ ವಾಹನ ಅಭಿವೃದ್ಧಿಗೂ ಅನುಮೋದನೆ ನೀಡಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, “ಹೆಚ್ಚಿನ ಅಂಶಗಳನ್ನು ಸೇರಿಸಲು ಚಂದ್ರಯಾನ-4 ಮಿಷನ್ ಅನ್ನು ವಿಸ್ತರಿಸಲಾಗಿದೆ. ಮುಂದಿನ ಹಂತವು ಚಂದ್ರನಿಗೆ ಮಾನವಸಹಿತ ಮಿಷನ್ ಅನ್ನು ಸಾಧಿಸುವುದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪೂರ್ವಸಿದ್ಧತಾ ಕ್ರಮಗಳನ್ನು ಅನುಮೋದಿಸಲಾಗಿದೆ” ಎಂದರು.
https://x.com/ANI/status/1836340284197867955?ref_src=twsrc%5Etfw%7Ctwcamp%5Etweetembed%7Ctwterm%5E1836340284197867955%7Ctwgr%5E21901338a0a994c577c93b51ed6a19b37e1c2585%7Ctwcon%5Es1_&ref_url=https%3A%2F%2Fnews.abplive.com%2Fscience%2Fchandrayaan-4-venus-orbitor-mission-indian-space-station-gaganyaan-get-cabinet-nod-isro-to-fly-historic-missions-by-2028-1718181
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.