ಶಿನ್ಯುಝಾಯ್: ಚೀನಾದಲ್ಲಿ ಅದ್ಭುತ ವಿನ್ಯಾಸದೊಂದಿಗೆ ಸಂಪೂರ್ಣವಾಗಿ ಗಾಜಿನಿಂದ ನಿರ್ಮಿಸಲಾಗಿರುವ ತೂಗು ಸೇತುವೆ ಮೇಲೆ ಬಿರುಕು ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಮಧ್ಯ ಚೀನಾದ ಶಿನ್ಯುಝಾಯ್ ರಾಷ್ಟ್ರೀಯ ಭೂವಿಜ್ಞಾನ ಪಾರ್ಕ್ನಲ್ಲಿ ಯನ್ಟೈಶಾನ್ ಗಾಜಿನ ಸೇತುವೆಯು ಸೆ.20ರಂದು ಉದ್ಘಾಟನೆಗೊಂಡಿದ್ದು ಸಾಕಷ್ಟು ಪ್ರವಾಸಿಗರ ಗಮನ ಸೆಳೆದಿತ್ತು. ಹೊವಾನ್ ಕ್ಯೊ (ಶಕ್ತಿಶಾಲಿ) ಎಂದು ಹೆಸರಿಸಲಾಗಿರುವ ಸೇತುವೆ 980 ಅಡಿ ಉದ್ದ, ಕಣಿವೆಯ ಮೇಲೆ 600 ಅಡಿ ಎತ್ತರವಿದ್ದು, ಎರಡು ಬಂಡೆಗಳ ನಡುವೆ ನಿರ್ಮಿಸಲಾಗಿದೆ. ಈ ತಾಣಕ್ಕೆ ರಜಾ ದಿನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತದೆ.
ಆದರೆ ಅ.೫ರಂದು ಇದರಲ್ಲಿ ಬಿರುಕು ಉಂಟಾಗಿ ಒಡೆಯುವಂತೆ ಶಬ್ದ ಕೇಳಿ ಬಂದಿದ್ದು, ಪ್ರವಾಸಿಗರು ತಕ್ಷಣವೇ ಸೇತುವೆ ಬಿಟ್ಟು ಬೇರೆಡೆಗೆ ಧಾವಿಸಿದ್ದಾರೆ ಎಂದು ಕೆಲ ಪ್ರವಾಸಿಗರು ಚೀನೀ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.
ಯನ್ಟೈಶಾನ್ ರೆಸಾರ್ಟ್ನ ಓರ್ವ ಸಿಬ್ಬಂದಿ ಸೇತುವೆಗೆ ಬಿರುಕು ಉಂಟಾಗಿರುವ ಬಗ್ಗೆ ದೃಢಪಡಿಸಿದ್ದಾರೆ. ಗಾಜಿನ ಈ ಸೇತುವೆ ಮೇಲೆ ಅಪರಿಚಿತರೋರ್ವರು ಥರ್ಮೋಸ್ ಬೀಳಿಸಿರುವ ಬಗ್ಗೆ ಆರೋಪಿಸಲಾಗಿದ್ದು, ಕಲ ಸಮಯದವರೆಗೆ ಈ ಸೇತುವೆಯನ್ನು ಮುಚ್ಚಲಾಗಿತ್ತು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.