ನವದೆಹಲಿ: ನಟ ವಿಜಯ್ ವರ್ಮಾ ಅಭಿನಯದ ʼIC 814: ದಿ ಕಂದಹಾರ್ ಹೈಜಾಕ್ʼ ಸಿನಿಮಾ ಆಗಸ್ಟ್ 29 ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡಿದೆ. ಅನುಭವ್ ಸಿನ್ಹಾ ಅವರು ನಿರ್ದೇಶಿಸಿದ ಈ ಚಲನಚಿತ್ರವು 1999 ರಲ್ಲಿ ಭಯೋತ್ಪಾದಕರು ಇಂಡಿಯನ್ ಏರ್ಲೈನ್ಸ್ ಅನ್ನು ಹೈಜಾಕ್ ಮಾಡಿದ ನೈಜ ಘಟನೆಗಳನ್ನು ಆಧರಿಸಿದೆ.
ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸುತ್ತಿದೆ, ಆದರೆ ಇದರಲ್ಲಿ ಭಯೋತ್ಪಾದಕರ ನೈಜ ಹೆಸರನ್ನು ಮರೆಮಾಡಿ ಹಿಂದೂ ಹೆಸರುಗಳನ್ನು ಇಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ, ನೈಜ ತಪ್ಪಿತಸ್ಥರ ಕೃತ್ಯವನ್ನು “ವೈಟ್ವಾಶ್” ಮಾಡುವ ಪ್ರಯತ್ನ ಇದೆಂದು ಆರೋಪಗಳು ಕೇಳಿ ಬರುತ್ತಿವೆ.
ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸಯೀದ್, ಸನ್ನಿ, ಅಹ್ಮದ್ ಖಾಜಿ, ಜಹೂರ್ ಮಿಸ್ತ್ರಿ ಮತ್ತು ಶಾಕಿರ್ ಎಂಬ ಹೆಸರಿನ ಉಗ್ರರು ವಿಮಾನವನ್ನು ಹೈಜಾಕ್ ಮಾಡಿದ್ದರು. ಆದರೆ ಸಿನಿಮಾದಲ್ಲಿ ಹೆಸರನ್ನು ಭೋಲಾ, ಶಂಕರ್, ಡಾಕ್ಟರ್, ಬರ್ಗರ್ ಮತ್ತು ಚೀಫ್ ಎಂದು ಬದಲಾಯಿಸಲಾಗಿದೆ. ಅಂದರೆ ಇಲ್ಲಿ ಉಗ್ರರ ನಿಜ ಹೆಸರು ಹೇಳದೆ ಕೇವಲ ಸಾಂಕೇತಿಕ ಹೆಸರುಗಳನ್ನು ಇಡಲಾಗಿದೆ.
Names of IC814 Hijackers changed to Shankar & Bhola by @anubhavsinha
This is how Bollywood let the TERRORISTS WIN:#BoycottBollywood#IC814TheKandaharHijack
IC814 Names in
Hijackers Webseries pic.twitter.com/lv0xeVgIJu— Stranger (@amarDgreat) September 1, 2024
https://x.com/rigorous_tony/status/1829909664890331645?ref_src=twsrc%5Etfw%7Ctwcamp%5Etweetembed%7Ctwterm%5E1829909664890331645%7Ctwgr%5Ef09d63cda569524dcbaac885f1459914e26e10b8%7Ctwcon%5Es1_&ref_url=https%3A%2F%2Fd-40302940803166008498.ampproject.net%2F2406131415000%2Fframe.html
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.