ಬ್ರುಸೆಲ್ಸ್: ವಿಯೆನ್ನಾದ ಕೆಫೆಗಳಿಂದ ಹಿಡಿದು ಐರೋಪ್ಯ ಒಕ್ಕೂಟದ ಉನ್ನತ ನ್ಯಾಯಾಲಗಳವರೆಗೂ, ಫೇಸ್ಬುಕ್ ಮತ್ತು ಅಮೇರಿಕದ ಕಣ್ಗಾವಲಿನ ವಿರುದ್ಧ ಆಸ್ಟ್ರಿಯಾದ ಕಾನೂನು ವಿದ್ಯಾರ್ಥಿಯ ಎರಡು ವರ್ಷಗಳ ಹೋರಾಟ ಜಯದಲ್ಲಿ ಕೊನೆಗೊಂಡಿದೆ.
ಫೇಸ್ಬುಕ್ ಬಳಕೆದಾರ, 28 ವರ್ಷದ ಮ್ಯಾಕ್ಸ್ ಶ್ರೆಮ್ಸ್ ವಿಯೆನ್ನಾ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ ಪಿ.ಎಚ್ಡಿ ಪದವಿ ಪಡೆದಿದ್ದು, ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾ ವಿಶ್ವವಿದ್ಯಾಲಯದಲ್ಲ್ಲಿ ’ಗೌಪ್ಯತೆ’ (Pಡಿivಚಿಛಿಥಿ) ವಿಷಯದಲ್ಲಿ ತನ್ನ ಸೆಮಿಸ್ಟರ್ ಪೂರ್ಣಗೊಳಿಸಿದ್ದಾರೆ.
ಫೇಸ್ಬುಕ್, ಗೂಗಲ್ನ ಗೌಪ್ಯ ಡಾಟಾ ವರ್ಗಾವಣೆ ಮಾಡುತ್ತಿರುವ ಅಮೇರಿಕದ ಸಾಮೂಹಿಕ ಕಣ್ಗಾವಲು ಮತ್ತು ಐರೋಪ್ಯ ಒಕ್ಕೂಟದಿಂದ ಐಬಿಎಂ ಸೇರಿ ಸುಮಾರು ೪೦೦೦ ಕಂಪೆನಿಗಳು ಈ ಮಾಹಿತಿಗಳನ್ನು ಪಡೆಯುತ್ತಿದ್ದು ಇದರ ವಿರುದ್ಧ ಕಾನೂನು ಸಮರ ನಡೆಸಲಾಯಿತು.
ಆಸ್ಟ್ರ್ಟಿಯಾ ರಾಜಧಾನಿಯಮ್ಯಾರಿಯರಿಫ್ ಶಾಪಿಂಗ್ ಜಿಲ್ಲೆಯಲ್ಲಿ ಶ್ರೆಮ್ಸ್ ಅವರು ತಮ್ಮದೇ ಆದ ರಿಟ್ಟರ್ ಕೆಫೆಯನ್ನು ಹೊಂದಿದ್ದಾರೆ.
೨೦೧೩ರಲ್ಲಿ ಮಾಜಿ ರಾಷ್ಟ್ರೀಯ ಭದ್ರತಾ ಸಂಸ್ಥೆ ಗುತ್ತಿಗೆದಾರ ಎಡ್ವರ್ಡ್ ಸ್ನೊಡೆನ್ ಅಮೇರಿಕ ಸರ್ಕಾರದ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡಿ ಅವುಗಳನ್ನು ಫೇಸ್ಬುಕ್ನಂತಹ ತಂತ್ರಜ್ಞಾನ ಕಂಪೆನಿಗಳಿಂದ ನೇರವಾಗಿ ಪಡೆಯುವಂತೆ ಮಾಡಿದ್ದರು.
ಶ್ರೆಮ್ಸ್ ಗೌಪ್ಯತೆ ಸಮರವನ್ನು ಕೈಗೆತ್ತಿಕೊಂಡು ಫೇಸ್ಬುಕ್ ವಿರುದ್ಧ ಐರ್ಲೆಂಡ್ನ ಅದರ ಯುರೋಪಿಯನ್ ಕೇಂದ್ರ ಕಚೇರಿಯಲ್ಲಿ 22 ದೂರುಗಳನ್ನು ನೀಡಿದ್ದರು. ಐರೋಪ್ಯ ಫೇಸ್ಬುಕ್ ಬಳಕೆದಾರರ ಡಾಟಾವನ್ನು ಅಮೇರಿಕದ ಸರ್ವರ್ಗಳಿಗೆ ವರ್ಗಾವಣೆ ಮಾಡುವನ್ನು ನಿಲ್ಲಿಸಲು ಕೋರಿ ಐರಿಷ್ ಡಾಟಾ ಎಂಟ್ರಿ ಪ್ರೊಟೆಕ್ಷನ್ ಆಯುಕ್ತರಿಗೆ ದೂರು ನೀಡಿದ್ದರು. ಆದರೆ ಆ ದೂರನ್ನು ತಳ್ಳಿ ಹಾಕಲಾಗಿತ್ತು.
ಆದರೆ ಶ್ರೆಮ್ಸ್ ಲೆಕ್ಸೆಂಬರ್ಗ್ ಮೂಲದ ಯುರೋಪಿಯನ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ನ್ಯಾಯಾಲಯವು ಸಾವಿರಾರು ಕಂಪೆನಿಗಳು ಮಾಡುತ್ತಿದ್ದ ಡಾಟಾ ವರ್ಗಾವಣೆಗೆ ಆಧಾರವಾಗಿದ್ದ ಚೌಕಟ್ಟನ್ನು ತಳ್ಳಿಹಾಕಿದೆ.
ಮ್ಯಾಕ್ಸ್ ಶ್ರೆಮ್ಸ್ ಹಾಗೂ ಎಡ್ವರ್ಡ್ ಸ್ನೊಡೆನ್ ವಿಶ್ವ ಮಾಹಿತಿ ಸಂರಕ್ಷಣೆ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ ಎಂದು ಸ್ಟೆವಾರ್ಟ್ ರೂಮ್ ಹೇಳಿದ್ದಾರೆ.
ಸ್ನೊಡೆನ್ ಸಹಾಯವಿಲ್ಲದೇ ಈ ಸಮರದ ಜಯ ಅಸಾಧ್ಯವಾಗಿತ್ತು ಎಂದು ಶ್ರೆಮ್ಸ್ ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.