
ನವದೆಹಲಿ: 2024-25ರ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಅವರು ರಾಷ್ಟ್ರೀಯ ಲಾಂಛನ ಹೊಂದಿದ ಕೆಂಪು ಬ್ಯಾಗ್ (ಬಾಹಿ-ಖಾತಾ)ನಲ್ಲಿನ ಟ್ಯಾಬ್ಲೆಟ್ ಅನ್ನು ಮಾಧ್ಯಮಗಳಿಗೆ ತೋರಿಸುತ್ತಾ ಹಣಕಾಸು ಸಚಿವಾಲಯದಿಂದ ಹೊರನಡೆದರು.
2019 ರಲ್ಲಿ, ಸೀತಾರಾಮನ್ ಅವರು ಬಜೆಟ್ ಮಂಡನೆಗೆ ಸಂಬಂಧಿಸಿದ ವಸಾಹತುಶಾಹಿ ಪರಂಪರೆಯಾದ ಬ್ರೀಫ್ ಕೇಸ್ ಮೂಲಕ ಬಜೆಟ್ ಪ್ರತಿ ಸಾಗಿಸುವ ಸಂಪ್ರದಾಯವನ್ನು ಕೊನೆಗೊಳಿಸಿದ ಬಾಹಿ-ಖಾತಾ ಪರಿಚಯಿಸಿದ್ದಾರೆ. 2021 ರಲ್ಲಿ, ಹಣಕಾಸು ಸಚಿವರು ‘ಮೇಡ್ ಇನ್ ಇಂಡಿಯಾ’ ಟ್ಯಾಬ್ಲೆಟ್ ಅನ್ನು ಬಳಸಿಕೊಂಡು ಕಾಗದರಹಿತ ರೂಪದಲ್ಲಿ ಬಜೆಟ್ ಅನ್ನು ಮಂಡಿಸಿದರು.
ಕೆಂಪು ಬಣ್ಣದ ‘ಬಹಿ ಖಾತಾ’ ಡಿಜಿಟಲ್ ಟ್ಯಾಬ್ಲೆಟ್ ಹಿಡಿದುಕೊಂಡು ತಮ್ಮ ತಂಡದೊಂದಿಗೆ ಪೋಸ್ ನೀಡಿದ ನಂತರ, ಸೀತಾರಾಮನ್ ರಾಷ್ಟ್ರಪತಿ ಭವನಕ್ಕೆ ತೆರಳಿದರು.
ಹಣಕಾಸು ಸಚಿವರ ಸತತ ಏಳನೇ ಬಜೆಟ್ ಇದಾಗಿದೆ. ಆದಾಯ ತೆರಿಗೆ ರಚನೆಯಲ್ಲಿನ ಬದಲಾವಣೆಗಳು ಮತ್ತು ಭಾರತದಲ್ಲಿ ವ್ಯಾಪಾರ ಮಾಡುವ ಸುಲಭತೆಯನ್ನು ಸುಧಾರಿಸುವ ಬಗ್ಗೆ ಬಜೆಟ್ ಕೇಂದ್ರೀಕರಿಸುವ ಸಾಧ್ಯತೆಯಿದೆ.
Finance Minister #NirmalaSitharaman and other members of the finance ministry leave the ministry to present the budget at the Parliament in #NewDelhi.#BudgetWithTNIE
Express Photos | @Shekharyadav02 pic.twitter.com/OclLyLd5JO
— The New Indian Express (@NewIndianXpress) July 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


