ಆಷಾಢದಂದು ಬರುವ ಏಕಾದಶಿಯನ್ನು ದೇಶದೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಇಂದು ಆಷಾಢ ಏಕಾದಶಿಯಾಗಿದ್ದು, ದೇವಸ್ಥಾನಗಳಲ್ಲಿ ಉಪವಾಸ ವ್ರತ, ಪೂಜೆ, ಏಕಾಹ ಭಜನೆಗಳನ್ನು ಮಾಡುವುದರ ಮೂಲಕ ಮಾಡಲಾಗುತ್ತದೆ. ಅಂದು ಪಂಢರಾಪುರದ ವಿಠೋಭ ರುಕುಮಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಜನೆ ಅಭಂಗ ಮತ್ತು ವಿವಿಧ ಆರತಿಗಳೊಂದಿಗೆ ಪೂಜಿಸಲಾಗುತ್ತದೆ. ಇಲ್ಲಿಂದಲೇ ಚಾತುರ್ಮಾಸ್ಯ ವ್ರತ ಆರಂಭವಾದುವುದು.
ಚಾತುರ್ಮಾಸ್ಯ ಎಂದರೇನು ಮತ್ತು ಅದರ ಮಹತ್ವ : ಚಾತುರ್ಮಾಸ್ಯ ಎಂದರೆ ನಾಲ್ಕು ತಿಂಗಳುಗಳು ಎಂದರ್ಥ. ಪುರಾಣಗಳ ಪ್ರಕಾರ ಶ್ರೀಮನ್ನಾರಾಯಣನಾದ ವಿಷ್ಣುವು ನಾಲ್ಕು ತಿಂಗಳ ಕಾಲ ಯೋಗ ನಿದ್ರೆಗೆ ಹೋಗುತ್ತಾನೆ. ಆಷಾಢ ಶುದ್ಧ ಏಕಾದಶಿಯಂದು ಚಾತುರ್ಮಾಸ್ಯ ಪ್ರಾರಂಭವಾಗಿ ಕಾರ್ತಿಕ ಏಕಾದಶಿಯಂದು ಕೊನೆಗೊಳ್ಳುತ್ತದೆ. ಚಾತುರ್ಮಾಸ್ಯದ ಸಂದರ್ಭ ಮಳೆಗಾಲವಾಗಿರುತ್ತದೆ. ಸ್ವಾಮೀಜಿಗಳು, ಮಠಾಧಿಪತಿಗಳು ಮಠದ ದೇವರಿಗೆ ಯಾ ಮೂಲದೇವರಿಗೆ ಚಾತುರ್ಮಾಸ್ಯ ಹಿಡಿಯುದು ಸಂಪ್ರದಾಯ.
ಈ ಸಂದರ್ಭ ಬೇಳೆ-ಕಾಳು, ಫಲಾಹಾರದಿಗಳನ್ನು, ಮೊಳಕೆ ಬರಿಸಿದ ಧಾನ್ಯಗಳನ್ನು ತಿನ್ನಬೇಕು. ವಿಷ್ಣುವು ಯೋಗನಿದ್ರೆಗೆ ಹೋಗುವ ದಿನವಾದ ಈ ಏಕಾದಶಿಯನ್ನು ಪದ್ಮ ಏಕಾದಶಿ ಅಥವಾ ಶಯನ ಏಕಾದಶಿ ವೃತವೆಂದು ಕರೆಯುತ್ತಾರೆ.
ಪುರಾಣಗಳ ಪ್ರಕಾರ ಸೂರ್ಯವಂಶದ ಅರಸನಾಗಿದ್ದ ಮಂದಾತ ಸತ್ಯ, ಧರ್ಮಕ್ಕೆ ಹೆಸರಾಗಿದ್ದ. ಒಮ್ಮೆ ೩ ವರ್ಷಗಳ ಕಾಲ ಮಳೆ, ಬೆಳೆಯಿಲ್ಲದೇ ಬರಗಾಲ ಕಾಡಿತು. ಆಗ ಆತ ಅಂಗೀರಸ ಮಹಿರ್ಷಿಗಳಲ್ಲಿ ತನ್ನ ಕಷ್ಟಕ್ಕೆ ಕಾರಣವೇನೆಂಬುದನ್ನು ತಿಳಿಯಬಯಸುತ್ತಾನೆ. ಅಂಗೀರಸ ಮಹರ್ಷಿಗಳಲ್ಲಿ ಪರಿಹಾರವನ್ನು ಕೇಳುತ್ತಾನೆ. ಆ ಸಂದರ್ಭದಲ್ಲಿ ಅಂಗೀರಸ ಮಹರ್ಷಿಗಳು ಆಷಾಢ ಏಕಾದಶಿಯಂದು ರಾಜ್ಯದ ಅರಸ, ರಾಜ್ಯದ ಜನರು ಸೇರಿ ಉಪಾವಾಸ ಕೈಗೊಂಡರೆ ಮಾಡಿದ ಪಾಪಕರ್ಮ ನಾಶವಾಗುವುದು. ರಾಜ್ಯದಲ್ಲಿ ಸುಭಿಕ್ಷವಾಗಿ, ಮಳೆಯಾಗುವುದು ಎಂದು ಹೇಳಿದ್ದರು. ಅವರ ಮಾರ್ಗದರ್ಶನದಂತೆ ಆಷಾಢ ಏಕಾದಶಿ ವ್ರತ ಕೈಗೊಳ್ಳಲಾಯಿತು. ಇದರಿಂದ ರಾಜ್ಯದಲ್ಲಿ ಮಳೆ-ಬೆಳೆಯಾಗಿ ಸುಭಿಕ್ಷವಾಯಿತು.
ಸ್ವಾಮೀಜಿಗಳು ಮತ್ತು ಮಠಾಧೀಪತಿಗಳು ಚಾತುರ್ಮಾಸ್ಯ ವ್ರತನ್ನು ಕೈಗೊಳ್ಳುತ್ತಾರೆ. 4 ತಿಂಗಳ ಕಾಲ ಈ ಯತಿಗಳು ತಮ್ಮ ಮನಸನ್ನು, ದೇಹವನ್ನು ಚುರುಕುಗೊಳಿಸುವ ವಾತಾವರಣ ಏರ್ಪಡಿಸಿ ಆ ಮೂಲಕ ತಮ್ಮ ಜ್ಞಾನಾರ್ಜನೆ ಮತ್ತು ಪಾಂಡಿತ್ಯಕ್ಕಾಗಿ ಈ ಸಮಯವನ್ನು ಬಳಸುವ ಸಂಪ್ರದಾಯವಿದೆ. ತಮ್ಮ ಮಠದ ಕಾರ್ಯ, ಬೆಳವಣಿಗೆ ಬಗ್ಗೆ ಹೆಚ್ಚು ಈ ವೇಳೆ ಅವರು ಹೆಚ್ಚು ಗಮನವಹಿಸುವುದಿಲ್ಲ. ಅಲ್ಲದೇ ಈ ಸಮಯದಲ್ಲಿ ಪ್ರವಚನಗಳು ದಿಗ್ವಿಜಯೋತ್ಸವಗಳು ನಡೆಯುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಎರಡುವರೆ ತಿಂಗಳ ಕಾಲ ಈ ವೃತಾಚರಣೆ ಮಾಡಿ ಸಿಮೋಲ್ಲಂಘನ ಮಾಡಲಾಗುತ್ತದೆ ಎಂಬ ಮಾತೂ ಇದೆ.
ಅದೇನೇ ಇರಲಿ ಆಧ್ಯಾತ್ಮಿಕತೆಗೆ ಹೆಚ್ಚು ಪ್ರಾಶಸ್ಥ್ಯ ಕೊಡುವ ರಾಷ್ಟ್ರ ಭಾರತ ತನ್ನ ಜ್ಞಾನಾರ್ಜನೆಗೆ ಸಂಪ್ರದಾಯಿಕ ಶೈಲಿಯ ಲೇಪನ ನೀಡಿದ್ದು ಪ್ರಶಂಸನೀಯವೇ ಸರಿ. ಇದು ಭಾರತ ಭೌದ್ಧಿಕ ಚಿಂತನೆಗೆ ಹಿಡಿದ ಕನ್ನಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.