ನವದೆಹಲಿ: ರಕ್ಷಣಾ ಸಚಿವಾಲಯವು ಇಂದು ರಕ್ಷಣಾ ಪರಿಕರಗಳ ಐದನೇ ಸ್ವದೇಶೀಕರಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆಗೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ 346 ರಕ್ಷಣಾ ವಸ್ತುಗಳನ್ನು ಒಳಗೊಂಡಿರುವ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪರಿಕರಗಳ ಆಮದು ಇನ್ನು ಮುಂದೆ ನಿಲ್ಲಲಿದೆ ಮತ್ತು ಇವುಗಳ ದೇಶೀಯ ಉತ್ಪಾದನೆಗೆ ಒತ್ತು ನೀಡಲಾಗುತ್ತದೆ.
ಈ ಪರಿಕರಗಳು ಕಾರ್ಯತಂತ್ರವಾಗಿ ಪ್ರಮುಖವಾದ ಲೈನ್ ರಿಪ್ಲೇಸ್ಮೆಂಟ್ ಘಟಕಗಳು/ವ್ಯವಸ್ಥೆಗಳು/ಉಪ-ವ್ಯವಸ್ಥೆಗಳು/ಅಸೆಂಬ್ಲಿಗಳು, ಘಟಕಗಳು ಮತ್ತು ಕಚ್ಚಾ ಸಾಮಗ್ರಿಗಳನ್ನು ಒಳಗೊಂಡಿದೆ. ಇವುಗಳ ಆಮದು ಮೌಲ್ಯ 1,048 ಕೋಟಿ ರೂಪಾಯಿ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ಸೃಜನ್ ಪೋರ್ಟಲ್ನಲ್ಲಿ (https://srijandefence.gov.in) ಲಭ್ಯವಿರುವ ಪಟ್ಟಿಯಲ್ಲಿ ಸೂಚಿಸಿದಂತೆ ಸ್ವದೇಶೀಕರಣದ ಭಾಗವಾಗಿ ಈ ವಸ್ತುಗಳನ್ನು ಭಾರತೀಯ ಉದ್ಯಮದಿಂದ ಸಂಗ್ರಹಿಸಲಾಗುತ್ತದೆ.
ರಕ್ಷಣಾ ಸಚಿವಾಲಯವು 2020 ರಲ್ಲಿ ಸೃಜನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ನಲ್ಲಿ, ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (DPSUs) ಮತ್ತು ಸೇವಾ ಪ್ರಧಾನ ಕಛೇರಿಗಳು (SHQs) MSMEಗಳು ಮತ್ತು ಸ್ಟಾರ್ಟ್-ಅಪ್ಗಳು ಸೇರಿದಂತೆ ದೇಶೀಯ ಉದ್ಯಮಗಳಿಗೆ ರಕ್ಷಣಾ ವಸ್ತುಗಳನ್ನು ದೇಶೀಕರಣಕ್ಕಾಗಿ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.