ನವದೆಹಲಿ: ರಷ್ಯಾದೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ಬಳಸಿಕೊಂಡ ಭಾರತ ಉಕ್ರೇನ್ ಮೇಲಿನ ಕಾನೂನುಬಾಹಿರ ಯುದ್ಧವನ್ನು ಕೊನೆಗೊಳಿಸುವಂತೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಮನವಿ ಮಾಡಬೇಕು ಎಂದು ಯುಎಸ್ ಒತ್ತಾಯಿಸಿದೆ.
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ-ರಷ್ಯಾದ ಬಲವಾದ ಬಾಂಧವ್ಯವನ್ನು ಗಮನಿಸಿದ್ದು ಮಾತ್ರವಲ್ಲದೆ ಯುಎನ್ ಚಾರ್ಟರ್ ಅನ್ನು ಗೌರವಿಸುವಂತೆ ಪುಟಿನ್ ಅವರಿಗೆ ಹೇಳಬೇಕೆಂದು ಭಾರತವನ್ನು ಒತ್ತಾಯಿಸಿದ್ದಾರೆ.
“ಭಾರತವು ರಷ್ಯಾದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ. ಈ ಸಂಬಂಧವನ್ನು ಬಳಸಿಕೊಳ್ಳಬೇಕು ಎಂದು ಭಾರತವನ್ನು ಪ್ರೋತ್ಸಾಹಿಸುತ್ತೇವೆ. ಆ ದೀರ್ಘಾವಧಿಯ ಸಂಬಂಧ ಮತ್ತು ಅವರು ಹೊಂದಿರುವ ಅನನ್ಯ ಸ್ಥಾನವನ್ನು ಬಳಸಿಕೊಂಡು ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸಲು ಪುಟಿನ್ ಅವರನ್ನು ಒತ್ತಾಯಿಸಬೇಕು. ಪುಟಿನ್ ತನ್ನ ಕಾನೂನುಬಾಹಿರ ಯುದ್ಧವನ್ನು ಕೊನೆಗೊಳಿಸಲು ಮತ್ತು ಈ ಸಂಘರ್ಷಕ್ಕೆ ಶಾಶ್ವತವಾದ ಶಾಂತಿಯನ್ನು ಕಂಡುಕೊಳ್ಳಲು, ಯುಎನ್ ಚಾರ್ಟರ್ ಅನ್ನು ಗೌರವಿಸಲು, ಉಕ್ರೇನ್ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸಲು ಭಾರತ ಮನವಿ ಮಾಡಬೇಕು” ಎಂದು ಮಿಲ್ಲರ್ ಹೇಳಿದರು.
ಪ್ರಧಾನಿ ಇತ್ತೀಚಿಗೆ ರಷ್ಯಾಗೆ ಭೇಟಿ ನೀಡಿದ್ದು ಇದಕ್ಕೆ ಅಮೆರಿಕ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.