ಬೆಂಗಳೂರು: ಬಾಶ್ ವೊಕೇಶನಲ್ ಸೆಂಟರ್(ಬಿವಿಸಿ)ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರಿಗೆ ತನ್ನ ತಂಡದ ಕಾರ್ಯಗಳ ಬಗ್ಗೆ ವಿವರಿಸಿದ ಮಮತಾರಿಗೆ ಕನಸು ನನಸಾದ ಅನುಭವ.
ಬಿವಿಸಿನಲ್ಲಿ ಉದ್ಯೋಗಿಯಾಗಿರುವ ಮಮತಾ ಅವರನ್ನು ತಾವು, ಸ್ಟೆಫಿ, ಕಿರಣ್ ಮತ್ತು ನಿಖಿಲ್ ಅವರನ್ನೊಳಗೊಂಡ ತಂಡದ ಕಾರ್ಯ ಚಟುವಟಿಕೆಗಳ ಬಗ್ಗೆ ಗಣ್ಯರಿಗೆ ವಿವರಿಸುವುದಕ್ಕಾಗಿ ನೇಮಿಸಲಾಗಿತ್ತು.
ಮೆಕಾಟ್ರೋನಿಕ್ ರೋಬೋಟಿಕ್ ಸಿಸ್ಟಮ್ ಬಗ್ಗೆ ಮೋದಿ, ಮರ್ಕೆಲ್ ಮುಂದೆ ಮಮತಾ ಡಿಸ್ಪ್ಲೇ ಮಾಡಿದರು. ಈ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ ಅವರು ತಮ್ಮ ಸಂಸ್ಥೆಯಿಂದ ಶಾಬ್ಬಾಷ್ಗಿರಿ ಗಿಟ್ಟಿಸಿಕೊಂಡಿದ್ದಾರೆ.
ಕೆಳಮಟ್ಟದಿಂದ ಬಂದ ಮಮತಾ ಇಂದು ಬಿವಿಸಿ ಕಂಪನಿಯಲ್ಲಿ ಸಮರ್ಥ ಉದ್ಯೋಗಿ ಎನಿಸಿಕೊಂಡಿದ್ದಾರೆ. ಅವರ ತಂದೆ ನಾರಾಯಣ ಸ್ವಾಮಿ ಅವರು ರೈತರಾದರೆ, ತಾಯಿ ಗೃಹಿಣಿ, ಅವರ ತಂಗಿ ಎಂಜಿನಿಯರ್ ಆಗಿದ್ದಾರೆ.
ಮರ್ಕೆಲ್ ಅವರು ನನ್ನ ಕುಟುಂಬ ಮತ್ತು ಇಲ್ಲಿ ಸಿಗುತ್ತಿರುವ ತರಬೇತಿಯ ಬಗ್ಗೆ ನನ್ನನ್ನು ಕೇಳಿದರು. ಮನೆ ಹೋದ ತಕ್ಷಣ ಮೋದಿ ಮತ್ತು ಮಾರ್ಕೆಲ್ ಅವರನ್ನು ಭೇಟಿಯಾದ ಬಗ್ಗೆ ಹೆತ್ತವರಿಗೆ ಹೇಳುತ್ತೇನೆ. ಅವರು ಸಂತಸಗೊಳ್ಳುತ್ತಾರೆ ಎನ್ನುತ್ತಾರೆ ಮಮತಾ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.