ಭೋಪಾಲ್: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ‘ಬಾಲಕ ಬುದ್ಧಿʼಯವರು ಎಂದು ಮತೊಮ್ಮೆ ಪುನರುಚ್ಛರಿಸಿದ್ದಾರೆ. ಅಲ್ಲದೇ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕರಾಳ ದಿನಗಳನ್ನು ಮಾತ್ರ ನೋಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಮಮಂದಿರ ಚಳುವಳಿಯ ಬಗ್ಗೆ ರಾಹುಲ್ ನೀಡಿರುವ ಹೇಳಿಕೆ, ಗೊಂದಲ ಮತ್ತು ಸುಳ್ಳನ್ನು ಹರಡುತ್ತಿದೆ. ಅವರು ಇನ್ನೂ ಪ್ರಬುದ್ಧರಾಗದ ಬಾಲಿಶ ವ್ಯಕ್ತಿ, ಅವರು ಇನ್ನೂ ಸರಿಯಾಗಿ ವಿರೋಧ ಪಕ್ಷದ ನಾಯಕನಾಗಿಲ್ಲ ಎಂದಿದ್ದಾರೆ.
“ರಾಮ ಜನ್ಮಭೂಮಿ ಆಂದೋಲನವನ್ನು ಇಂಡಿ ಒಕ್ಕೂಟ ಸೋಲಿಸಿದೆ ಎಂದು ರಾಹುಲ್ ಹೇಳುತ್ತಾರೆ. ರಾಹುಲ್ ಅವರೇ, ರಾಮ ನಮ್ಮ ಅಸ್ತಿತ್ವ, ನಮ್ಮ ಆದರ್ಶ, ನಮ್ಮ ಜೀವನ, ನಮ್ಮ ದೇವರು ಮತ್ತು ರಾಮ ಭಾರತದ ಗುರುತು” ಎಂದು ಭೋಪಾಲ್ನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ನಂತರ ಚೌಹಾಣ್ ಹೇಳಿದ್ದಾರೆ.
ಶನಿವಾರ ಗುಜರಾತ್ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಎಲ್ ಕೆ ಅಡ್ವಾಣಿಯವರು ಆರಂಭಿಸಿದ ರಾಮಮಂದಿರ ಚಳವಳಿಯನ್ನು ಇಂಡಿ ಒಕ್ಕೂಟ ಸೋಲಿಸಿದೆ ಎಂದು ಹೇಳಿದ್ದರು. ಈ ಬಗೆಗಿನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಚೌಹಾಣ್, ರಾಹುಲ್ ಗಾಂಧಿಯವರ ಹೇಳಿಕೆಯನ್ನು ಲೇವಡಿ ಮಾಡಿದರು, ಭಗವಾನ್ ರಾಮನಿಲ್ಲದೆ ಭಾರತವನ್ನು ಊಹಿಸಲಾಗುವುದಿಲ್ಲ ಎಂದು ಪ್ರತಿಪಾದಿಸಿದರು.
ರಾಮಂದಿರ ಚಳುವಳಿ ಕಾಂಗ್ರೆಸ್ ಅನ್ನು ಹಲವು ಬಾರಿ ಅಧಿಕಾರದಿಂದ ಹೊರಹಾಕಿದೆ. ಅಲ್ಲದೇ ದೈವಿಕ ಮತ್ತು ಭವ್ಯವಾದ ದೇವಾಲಯದ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ, ಆದರೆ ರಾಹುಲ್ ಗಾಂಧಿ ಕೇವಲ ಸುಳ್ಳು ಹೇಳುತ್ತಿದ್ದಾರೆ. ಅಗ್ನಿವೀರ್ ಹುತಾತ್ಮರ ಬಗ್ಗೆ ಸಂಸತ್ತಿನಲ್ಲಿ ಗಾಂಧಿಯವರು ಸುಳ್ಳು ಹೇಳಿದ್ದಾರೆ ಮತ್ತು ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ನೀಡಿಲ್ಲ ಎಂದೂ ಅವರು ಸುಳ್ಳು ಹೇಳಿದ್ದಾರೆ ಎಂದರು.
“ರಾಹುಲ್ ಅವರಿಗೆ ಸುಳ್ಳು ಹೇಳುವುದು ಮತ್ತು ಗೊಂದಲವನ್ನು ಹರಡುವುದನ್ನು ಬಿಟ್ಟು ಬೇರೇನೂ ತಿಳಿದಿಲ್ಲ. ಅದಕ್ಕಾಗಿಯೇ ಈ ‘ಬಾಲ ಬುದ್ಧಿ’ ವ್ಯಕ್ತಿ ರಾಹುಲ್ ಗಾಂಧಿ ಅವರು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಲೇ ಇರುತ್ತಾರೆ. ಅವರು ರಾಮಮಂದಿರ ಚಳವಳಿಯನ್ನು ಹೇಗೆ ಸೋಲಿಸಿದರು ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಮನಸ್ಸಿಗೆ ಬಂದದ್ದನ್ನು ಹೇಳುವುದು ಕಾಂಗ್ರೆಸ್ಸಿನ ಪ್ರವೃತ್ತಿಯಾಗಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.