ಬೆಂಗಳೂರು : ಗೋ ಸಂರಕ್ಷಣೆಗಾಗಿ ಈ ಹಿಂದಿನ ಸರಕಾರ ರಚಿಸಿದ್ದ ಗೋ ಸೇವಾ ಆಯೋಗವನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ವಿಲೀನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಪ್ರತಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ಹಿಂದಿನ ಸರಕಾರ ದೇಸಿ ತಳಿಯ ಗೋವಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಕ್ರಮ ಗೋಸಾಗಾಟವನ್ನು ತಡೆಯಲು ಈ ಆಯೋಗವನ್ನು ರಚಿಸಿತ್ತು. ಅಲ್ಲದೇ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರುಗಳ ಸಂರಕ್ಷಣೆ (ಗೋಸೇವಾ ಆಯೋಗ ರಚನೆ) ನಿಯಮ-2012ನ್ನು ಜಾರಿಗೆ ತರಲು ಪ್ರಯತ್ನಿಸಿತು. ಆದರೆ ಅದಕ್ಕೆ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರಧ್ವಾಜ್ ಅಂಕಿತ ಹಾಕದೆ ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು. ಆ ಸಂದರ್ಭದಲ್ಲಿ ಸರಕಾರ ಗೋಸೇವಾ ಆಯೋಗವನ್ನು ರಚಿಸಿ ಅದರ ಅಧ್ಯಕ್ಷರಾಗಿ ಮಂಗಳೂರಿನ ಎಂ.ಬಿ.ಪುರಾಣಿಕ್ ಅವರನ್ನು ನೇಮಿಸಿತ್ತು.
ಸರಕಾರ ಬದಲಾಗುತ್ತಿದ್ದಂತೆ ಪ್ರಸಕ್ತ ಸರಕಾರವು ಆಯೋಗದ ಅಧ್ಯಕ್ಷರನ್ನು ಅನುರ್ಜಿತಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಕೋರ್ಟ್ಗೆ ಮೊರೆ ಹೋಗಿತ್ತು. ಕೋರ್ಟ್ ಇದು ಸರಕಾರದ ವಿವೇಚನಾ ಅಧಿಕಾರ ಎಂದು ತೀರ್ಪು ನೀಡಿತ್ತು.
ಆದರೆ ಈಗಿನ ಸರಕಾರ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಜಾನುವಾರು ಹತ್ಯೆಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ 1964ರ ಕಾಯ್ದೆಯಂತೆ ಅಕ್ರಮ ಗೋಸಾಗಾಟವನ್ನು ತಡೆಯಬಹುದು ಎಂದು ಹೇಳಿ ಗೋಸೇವಾ ಆಯೋಗಕ್ಕೆ ತಿಲಾಂಜಲಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.