ಇಸ್ಲಾಮಾಬಾದ್: ಭಾರತವು ಯಶಸ್ವಿಯಾಗಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಿದ ಬಗ್ಗೆ ಪಾಕಿಸ್ಥಾನದ ಸಂಸತ್ತಿನಲ್ಲೂ ಮೆಚ್ಚುಗೆಗಳು ಕೇಳಿ ಬಂದಿವೆ. ಭಾರತದ ಚುನಾವಣಾ ಪಾರದರ್ಶಕತೆ, ಶಾಂತಿಯುತ ಅಧಿಕಾರ ಹಸ್ತಾಂತರದ ಬಗ್ಗೆ ಅಲ್ಲಿನ ವಿರೋಧ ಪಕ್ಷದ ನಾಯಕ ಶಿಬ್ಲಿ ಫರಾಜ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪಾಕ್ ಸಂಸತ್ನಲ್ಲಿ ಮಾತನಾಡಿದ ಫರಾಜ್ ಅವರು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತವು ಯಾವುದೇ ಆಪಾದನೆಗಳಿಲ್ಲದೆ ಮತಯಂತ್ರಗಳನ್ನು ಬಳಸಿಕೊಂಡು ಚುನಾವಣೆಗಳನ್ನು ನಡೆಸಿ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದರು.
“ಇತ್ತೀಚೆಗೆ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯಿತು. ಲಕ್ಷಾಂತರ ಜನರು ಮತ ಹಾಕಿದರು. ಸಾವಿರಾರು ಮತಗಟ್ಟೆಗಳು ಸ್ಥಾಪನೆಯಾಗಿದ್ದವು. ದೂರದ ಪ್ರದೇಶದಲ್ಲಿ ವಾಸಿಸುವ ಒಬ್ಬ ವ್ಯಕ್ತಿಗೆ ಸಹ ಒಂದು ಮತಗಟ್ಟೆಯನ್ನು ನಿರ್ಮಿಸಲಾಗಿತ್ತು. ಒಂದು ತಿಂಗಳ ಕಾಲ ಇವಿಎಂ ಬಳಸಿ ಯಶಸ್ವಿಯಾಗಿ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅಕ್ರಮ ನಡೆದ ಬಗ್ಗೆ ಒಂದೇ ಒಂದು ಅಪಸ್ವರ ಬಂದಿಲ್ಲ. ಇದೇ ರೀತಿಯ ಪ್ರಗತಿಯನ್ನು ನಾನು ಪಾಕಿಸ್ತಾನದಲ್ಲಿ ನೋಡಲು ಬಯಸುತ್ತೇನೆ” ಎಂದು ಫರಾಜ್ ಹೇಳಿದ್ದಾರೆ.
ಪಾಕಿಸ್ತಾನದ ಚುನಾವಣೆಗಳ ಸಂದರ್ಭದಲ್ಲಿ ನಡೆಯುವ ಹಿಂಸಾಚಾರ ವಿವಾದಗಳ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿರುವ ಅವರು, ನಮ್ಮಲ್ಲಿ ಸೋತ ಅಭ್ಯರ್ಥಿಗಳು ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಇದು ದುರ್ಬಲಗೊಂಡ ರಾಜಕೀಯ ವ್ಯವಸ್ಥೆಯನ್ನು ತೋರಿಸುತ್ತದೆ ಎಂದಿದ್ದಾರೆ.
In the Pakistani Parliament, opposition leader Shibli Faraz praised the Indian electoral process, highlighting how the world's largest democracy conducted its lengthy elections with EVMs, announced results, and transferred power smoothly without any allegations of fraud. Why… pic.twitter.com/eNnzidup3x
— Ghulam Abbas Shah (@ghulamabbasshah) June 13, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.