ನವದೆಹಲಿ: ವಿದೇಶಿ ವಿಶ್ವವಿದ್ಯಾನಿಲಯಗಳಂತೆ ವರ್ಷಕ್ಕೆ ಎರಡು ಬಾರಿ ಪ್ರವೇಶವನ್ನು ನೀಡಲು ಭಾರತೀಯ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಮುಂದೆ ಅನುಮತಿ ನೀಡಲಾಗುವುದು ಎಂದು ಯುಜಿಸಿ ಮುಖ್ಯಸ್ಥ ಜಗದೇಶ್ ಕುಮಾರ್ ಹೇಳಿದ್ದಾರೆ.
ಜುಲೈ-ಆಗಸ್ಟ್ ಮತ್ತು ಜನವರಿ-ಫೆಬ್ರವರಿ 2024-25 ಶೈಕ್ಷಣಿಕ ಅವಧಿಗೆ ಈ ನಿಯಮ ಅನ್ವಯವಾಗುತ್ತದೆ.
“ಭಾರತೀಯ ವಿಶ್ವವಿದ್ಯಾನಿಲಯಗಳು ವರ್ಷಕ್ಕೆ ಎರಡು ಬಾರಿ ಪ್ರವೇಶವನ್ನು ನೀಡಿದರೆ, ಮಂಡಳಿಯ ಫಲಿತಾಂಶಗಳ ಪ್ರಕಟಣೆಯಲ್ಲಿ ವಿಳಂಬ, ಆರೋಗ್ಯ ಸಮಸ್ಯೆಗಳು ಅಥವಾ ವೈಯಕ್ತಿಕ ಕಾರಣಗಳಿಂದ ಜುಲೈ-ಆಗಸ್ಟ್ ಅಧಿವೇಶನದಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶವನ್ನು ಕಳೆದುಕೊಂಡಿರುವಂತಹ ಅನೇಕ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ” ಎಂದು ಕುಮಾರ್ ಹೇಳಿದ್ದಾರೆ.
“ದ್ವೈವಾರ್ಷಿಕ ವಿಶ್ವವಿದ್ಯಾನಿಲಯ ಪ್ರವೇಶಗಳು ಕಲಿಕೆಯಲ್ಲಿ ವಿದ್ಯಾರ್ಥಿಗಳ ಉತ್ಸಾಹ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರಸ್ತುತ ನಿಯಮದಲ್ಲಿ ಒಂದು ಬಾರಿ ಪ್ರವೇಶವನ್ನು ಕಳೆದುಕೊಂಡರೆ ಪ್ರವೇಶ ಪಡೆಯಲು ವಿದ್ಯಾರ್ಥಿ ಒಂದು ಪೂರ್ಣ ವರ್ಷ ಕಾಯಬೇಕಾಗುತ್ತದೆ. ಆದರೆ ಎರಡು ಬಾರಿ ಪ್ರವೇಶ ಕಲ್ಪಿಸಿದರೆ ಮೊದಲ ಅವಧಿಯಲ್ಲಿ ಅನಿವಾರ್ಯವಾಗಿ ಪ್ರವೇಶ ಕಳೆದುಕೊಂಡವರು ಮತ್ತೆ ಎರಡನೇ ಬಾರಿಯ ಪ್ರವೇಶ ಪಡೆದುಕೊಂಡು ಶಿಕ್ಷಣ ಮುಂದುವರೆಸಬಹುದು. ದ್ವೈವಾರ್ಷಿಕ ಪ್ರವೇಶದೊಂದಿಗೆ, ಉದ್ಯಮಗಳು ತಮ್ಮ ಕ್ಯಾಂಪಸ್ ನೇಮಕಾತಿಯನ್ನು ವರ್ಷಕ್ಕೆ ಎರಡು ಬಾರಿ ಮಾಡಬಹುದು, ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಸುಧಾರಿಸಬಹುದು”ಎಂದು ಅವರು ಹೇಳಿದರು.
ದ್ವೈವಾರ್ಷಿಕ ಪ್ರವೇಶಗಳು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಸಂಪನ್ಮೂಲ ವಿತರಣೆಗಳಾದ ಅಧ್ಯಾಪಕರು, ಲ್ಯಾಬ್ಗಳು, ತರಗತಿ ಕೊಠಡಿಗಳು ಮತ್ತು ಬೆಂಬಲ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಯೋಜಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ವಿಶ್ವವಿದ್ಯಾನಿಲಯದೊಳಗೆ ಉತ್ತಮ ಕ್ರಿಯಾತ್ಮಕ ಹರಿವು ಉಂಟಾಗುತ್ತದೆ ಎಂದು ವಿವರಿಸಿದರು.
“ವಿಶ್ವದಾದ್ಯಂತ ವಿಶ್ವವಿದ್ಯಾನಿಲಯಗಳು ಈಗಾಗಲೇ ದ್ವೈವಾರ್ಷಿಕ ಪ್ರವೇಶ ವ್ಯವಸ್ಥೆಯನ್ನು ಅನುಸರಿಸುತ್ತವೆ. ಭಾರತೀಯ ಸಂಸ್ಥೆಗಳು ಕೂಡ ದ್ವೈವಾರ್ಷಿಕ ಪ್ರವೇಶ ಚಕ್ರವನ್ನು ಅಳವಡಿಸಿಕೊಂಡರೆ, ಅಂತರರಾಷ್ಟ್ರೀಯ ಸಹಯೋಗಗಳನ್ನು ಮತ್ತು ವಿದ್ಯಾರ್ಥಿ ವಿನಿಮಯವನ್ನು ಹೆಚ್ಚಿಸಬಹುದು. ಇದರ ಪರಿಣಾಮವಾಗಿ, ನಮ್ಮ ಜಾಗತಿಕ ಸ್ಪರ್ಧಾತ್ಮಕತೆ ಸುಧಾರಿಸುತ್ತದೆ ಮತ್ತು ನಾವು ಜಾಗತಿಕ ಶೈಕ್ಷಣಿಕ ಮಾನದಂಡಗಳೊಂದಿಗೆ ಹೊಂದಾಣಿಕೆ ಆಗುತ್ತೇವೆ” ಎಂದು ಕುಮಾರ್ ವಿವರಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.