ಬೆಂಗಳೂರು: ಪ್ರಸ್ತುತ ಬೆಂಗಳೂರಿನಲ್ಲಿರುವ ಜರ್ಮನ್ ಚಾನ್ಸೆಲರ್ ಏಂಜೆಲೋ ಮಾರ್ಕೆಲ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಐಟಿ ಸಂಸ್ಥೆ ನಸ್ಕಾಂ ಆಯೋಜಿಸಿರುವ ಇಂಡೋ-ಜರ್ಮನ್ ಸಮಿತ್ನಲ್ಲಿ ಪಾಲ್ಗೊಂಡರು.
ಈ ಸಭೆಯಲ್ಲಿ ಮಾತನಾಡಿದ ಮೋದಿ, ’ಉದ್ಯಮ ಮಾಡಲು ಭಾರತವನ್ನು ಸುಲಭದ ಜಾಗವನ್ನಾಗಿಸುವ ಸಲುವಾಗಿ ಕಳೆದ 15 ತಿಂಗಳಿನಿಂದ ಶ್ರಮಿಸುತ್ತಿದ್ದೇವೆ. ಬಂಡವಾಳದಾರರಿಗೆ ಅಡೆತಡೆಗಳಾಗಿದ್ದ ಹಲವಾರು ವಿಷಯಗಳನ್ನು ತೊಡೆದು ಹಾಕಲು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದರು.
ಡಿಜಿಟಲ್ ಇಂಡಿಯಾವನ್ನು ಪ್ರಸ್ತಾಪಿಸಿದ ಅವರು, ಭಾರತದ ಸಾಫ್ಟ್ವೇರ್ ಜಗತ್ತಿನ ಹಾರ್ಡ್ವೇರ್ನ್ನು ಮುಂದಕ್ಕೆ ಹೋಗುವಂತೆ ಮಾಡುತ್ತದೆ ಎಂದರು.
ಏಂಜೆಲೋ ಮಾರ್ಕೆಲ್ ಮಾತನಾಡಿ, ’ಭಾರತದ ಎಂಜಿನಿಯರ್ಗಳು ಮತ್ತು ಭಾರತದ ಐಟಿ ದಿಗ್ಗಜರು ಬೆಂಗಳೂರಿನಲ್ಲಿ ಸೇರಿದ್ದಾರೆ’ ಎಂದರು.
ಇದಕ್ಕೂ ಮುನ್ನ ಉಭಯ ನಾಯಕರು ಬೆಂಗಳೂರಿನಲ್ಲಿನ ಜರ್ಮನ್ ಅಟೋಮೋಟಿವ್ ಪ್ಲಾಂಟ್ ಬಾಶ್ ಗೆ ಭೇಟಿ ನೀಡಿದರು. ಮೋದಿ ಇಂದು ಬೆಳಿಗ್ಗೆ ಸಿಲಿಕಾನ್ ಸಿಟಿಗೆ ಆಗಮಿಸಿದರೆ, ಮಾರ್ಕೆಲ್ ಸೋಮವಾರ ರಾತ್ರಿ ಆಗಮಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.