ಗುವಾಹಟಿ: ಈಶಾನ್ಯದಲ್ಲಿ ರೆಮಲ್ ಚಂಡಮಾರುತ ಸೃಷ್ಟಿಸಿದ ಆವಾಂತರಕ್ಕೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ. ಅಸ್ಸಾಂನಲ್ಲಿ ಇಂದು ಕೂಡ ಪ್ರವಾಹ ಜನರನ್ನು ಬಾಧಿಸಿದೆ, 6 ಜನರು ಸಾವನ್ನಪ್ಪಿದ್ದಾರೆ ಮತ್ತು 11 ಜಿಲ್ಲೆಗಳಲ್ಲಿ ಸುಮಾರು 3,50,000 ಜನರು ಸಂತ್ರಸ್ತರಾಗಿದ್ದಾರೆ, ರೆಮಲ್ ಚಂಡಮಾರುತದ ನಂತರ ನಿರಂತರ ಮಳೆಯ ನಂತರ ಪ್ರಮುಖ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.
ಪ್ರವಾಹದಿಂದಾಗಿ 25 ಕಂದಾಯ ವೃತ್ತಗಳ ಒಟ್ಟು 560 ಗ್ರಾಮಗಳು ಹಾನಿಗೊಳಗಾಗಿದ್ದು, ರಾಜ್ಯಾದ್ಯಂತ 4900 ಹೆಕ್ಟೇರ್ಗೂ ಹೆಚ್ಚು ಬೆಳೆ ಹಾನಿಯಾಗಿದೆ. ಕ್ಯಾಚಾರ್ನಲ್ಲಿ ಒಟ್ಟು 3 ಜನರು, ಹೈಲಕಂಡಿಯಲ್ಲಿ 2 ಮತ್ತು ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ನೀರಿನಿಂದ ಹಲವಾರು ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಕ್ಯಾಚಾರ್, ಕರೀಮ್ಗಂಜ್ ಮತ್ತು ನಾಗಾನ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ.
ರಾಜ್ಯ ಸರ್ಕಾರವು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 148 ಪರಿಹಾರ ಶಿಬಿರಗಳನ್ನು ಮತ್ತು 39 ಪರಿಹಾರ ವಿತರಣಾ ಕೇಂದ್ರಗಳನ್ನು ತೆರೆದಿದೆ ಮತ್ತು ರಕ್ಷಣೆ ಮತ್ತು ಪರಿಹಾರಕ್ಕಾಗಿ NDRF ಮತ್ತು SDRF ತಂಡಗಳನ್ನು ಸಹ ನಿಯೋಜಿಸಲಾಗಿದೆ. ಕೊಪಿಲಿ, ಬರಾಕ್, ಕಟಖಲ್ ಮತ್ತು ಕುಶಿಯಾರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.