ನವದೆಹಲಿ: ಉದ್ಯೋಗ ವಂಚಕರ ಬಲೆಗೆ ಸಿಲುಕಿ ಕಾಂಬೋಡಿಯಾದಲ್ಲಿ ಪರದಾಡುತ್ತಿದ್ದ 60 ಭಾರತೀಯರ ಮೊದಲ ಬ್ಯಾಚ್ ಕೊನೆಗೂ ಭಾರತಕ್ಕೆ ವಾಪಾಸ್ ಆಗಮಿಸಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿಯು, “ವಿದೇಶದಲ್ಲಿರುವ ಭಾರತೀಯರಿಗೆ ಸಹಾಯ ಮಾಡಲು ಯಾವಾಗಲೂ ಬದ್ಧವಾಗಿದ್ದೇವೆ. ಮೋಸದ ಉದ್ಯೋಗದಾತರಿಂದ ಕಾಂಬೋಡಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯಿಂದ ರಕ್ಷಿಸಲ್ಪಟ್ಟ 60 ಭಾರತೀಯರ ಮೊದಲ ಬ್ಯಾಚ್ ಸ್ವದೇಶಕ್ಕೆ ಮರಳಿದೆ. ಬೆಂಬಲಕ್ಕಾಗಿ ಕಾಂಬೋಡಿಯಾದ ಅಧಿಕಾರಿಗಳಿಗೆ ಧನ್ಯವಾದಗಳು” ಎಂದಿದೆ.
ಭಾರತೀಯರನ್ನು ಅಧಿಕಾರಿಗಳು ಮೇ 20 ರಂದು ಜಿನ್ಬೆ-4 ಎಂಬ ಸ್ಥಳದಿಂದ ರಕ್ಷಿಸಿದರು. ಸಿಹಾನೌಕ್ವಿಲ್ಲೆಯಲ್ಲಿ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯಾಚರಣೆಯನ್ನು ನಡೆಸಲಾಯಿತು.
ಉದ್ಯೋಗಕ್ಕಾಗಿ ಕಾಂಬೋಡಿಯಾಗೆ ಪ್ರಯಾಣಿಸುವವರಿಗೆ ಭಾರತೀಯ ರಾಯಭಾರ ಕಚೇರಿ ಇತ್ತೀಚೆಗೆ ಸಲಹೆಯನ್ನು ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅನುಮೋದಿಸಿದ ಅಧಿಕೃತ ಏಜೆಂಟರ ಮೂಲಕ ಮಾತ್ರ ಉದ್ಯೋಗವನ್ನು ಪಡೆದುಕೊಳ್ಳಲು ಭಾರತೀಯ ಪ್ರಜೆಗಳಿಗೆ ನಿರ್ದೇಶನ ನೀಡಲಾಗಿದೆ.
Always committed to helping Indians abroad.
First batch of 60 Indian nationals rescued by Indian Embassy in Cambodia from fraudulent employers return home. Thank the Cambodian authorities for their support. @MOICambodia @IndianDiplomacy @MEAIndia @meaMADAD pic.twitter.com/8PwGnO59Kg
— India in Cambodia (@indembcam) May 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.