ವಾಷಿಂಗ್ಟನ್: ಅಮೆರಿಕಾದ ಶ್ವೇತಭವನದಲ್ಲಿ ಭಾರತದ ಗೀತೆ ” ಸಾರೆ ಜಹಾನ್ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ” ಮೊಳಗಿದೆ.
ಅನ್ವಲ್ ಏಷ್ಯನ್ ಅಮೇರಿಕನ್, ನೇಟಿವ್ ಹವಾಯಿಯನ್ ಆಂಡ್ ಪೆಸಿಫಿಕ್ ಐಲ್ಯಾಂಡರ್ (AANHPI) ಹೆರಿಟೇಜ್ ತಿಂಗಳಿನಲ್ಲಿ ಶ್ವೇತಭವನದ ಮೆರೈನ್ ಬ್ಯಾಂಡ್ ಸಾರೆ ಜಹಾನ್ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾವನ್ನು ನುಡಿಸಿತು. ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಶ್ವೇತಭವನದ AANHPI ಕಮಿಷನರ್ ಅಜಯ್ ಜೈನ್ ಅವರು ಎಕ್ಸ್ ಪೋಸ್ಟ್ನಲ್ಲಿ ಈ ಕಾರ್ಯಕ್ರಮದ ಝಲಕ್ ಅನ್ನು ಹಂಚಿಕೊಂಡಿದ್ದಾರೆ.
“ವಿಪಿ ಹ್ಯಾರಿಸ್ ಅವರೊಂದಿಗೆ ಅಧ್ಯಕ್ಷ ಜೋ ಬಿಡೆನ್ ಅವರು ಆಯೋಜಿಸಿದ ವೈಟ್ ಹೌಸ್ AANHPI ಪರಂಪರೆಯ ಆಚರಣೆಯಲ್ಲಿ ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ನುಡಿಸಿದ್ದು ಕೇಳಿ ರೋಮಾಂಚನವಾಯಿತು. ಪಾನಿಪುರಿ ಮತ್ತು ಖೋಯಾ ಖಾದ್ಯವನ್ನು ಸಹ ನೀಡಲಾಯಿತು. ಅಮೇರಿಕಾ ಭಾರತ ಬಾಂಧವ್ಯವನ್ನು ಇದು ಬಲಪಡಿಸುತ್ತದೆ” ಎಂದಿದ್ದಾರೆ.
Thrilled to hear Saare Jahan Se accha Hindustan Hamara played at WHite House AANHPI heritage celebration hosted by President @JoeBiden with VP Harris @VP . Paanipuri and Khoya dish was also served .stronger US India relationship . @PMOIndia @narendramodi @DrSJaishankar @AmitShah pic.twitter.com/1M5lViwbF2
— Ajay Jain Bhutoria (@ajainb) May 14, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.