ಅಯೋಧ್ಯಾ: ಸೀತಾ ದೇವಿಗೆ ಸಮರ್ಪಿತವಾಗಿರುವ ಸೀತಾ ಮಾತೆಯ ದೇವಾಲಯದ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಭಾರತವು ಶ್ರೀಲಂಕಾಕ್ಕೆ ಪವಿತ್ರ ಸರಯೂ ನದಿ ನೀರನ್ನು ಕಳುಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸೀತಾ ಮಾತೆಯ ದೇವಾಲಯದ ಪ್ರತಿಷ್ಠಾಪನೆ ಮೇ 19 ರಂದು ನಡೆಯಲಿದೆ.
ಶ್ರೀಲಂಕಾದ ಪ್ರತಿನಿಧಿಗಳು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದ ಪತ್ರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ದೇವಾಲಯದಲ್ಲಿ ಸೀತಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಜರುಗಲಿರುವ ಧಾರ್ಮಿಕ ಸಮಾರಂಭಗಳಿಗೆ ಸರಯೂ ನದಿ ನೀರು ಬಳಕೆಯಾಗಲಿದೆ.
ಯುಪಿ ಸರ್ಕಾರದ ನಿರ್ದೇಶನದ ಮೇರೆಗೆ ಪ್ರವಾಸೋದ್ಯಮ ಇಲಾಖೆಗೆ ಪವಿತ್ರ ಜಲವನ್ನು ಸಾಗಿಸುವ ಜವಾಬ್ದಾರಿಯನ್ನು ನೀಡಲಾಗಿದೆ.
ರಾಮ ಮಂದಿರ ಟ್ರಸ್ಟ್ ಈ ಉಪಕ್ರಮವನ್ನು ಶ್ಲಾಘಿಸಿದೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸುವಲ್ಲಿ ಇದರ ಮಹತ್ವವನ್ನು ಒತ್ತಿಹೇಳಿದೆ.
“ಶ್ರೀಲಂಕಾದಲ್ಲಿ ಸೀತಾ ಮಾತೆಯ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ದೇವಾಲಯದ ಪ್ರತಿನಿಧಿಯು ಯುಪಿ ಸರ್ಕಾರದಿಂದ ಸರಯು ನದಿ ನೀರನ್ನು ಕೇಳಿದ್ದಾರೆ. ನಾವು ಪವಿತ್ರ ನೀರನ್ನು ಕಲಶದಲ್ಲಿ ಒದಗಿಸುತ್ತೇವೆ. ಮೇ 19 ರಂದು ಧಾರ್ಮಿಕ ಕ್ರಿಯೆಗಳು ನಡೆಯಲಿದೆ” ಎಂದು ಅಯೋಧ್ಯಾ ತೀರ್ಥ ವಿಕಾಸ ಪರಿಷತ್ನ ಸಿಇಒ ಸಂತೋಷ್ ಕುಮಾರ್ ಶರ್ಮಾ ಅವರು ಹೇಳಿದ್ದಾಎ.
ಸೀತಾ ದೇವಸ್ಥಾನದಲ್ಲಿ ನಡೆಯುವ ಸಮಾರಂಭವು ಭಾರತ ಮತ್ತು ಶ್ರೀಲಂಕಾ ನಡುವಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಸಂಕೇತಿಸುವ ಎರಡೂ ರಾಷ್ಟ್ರಗಳ ಹೃದಯಗಳನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.